×
Ad

ಎನ್‌ಎನ್‌ಓಯಿಂದ ಕಟ್ಟಡ ದಾನಿಗೆ ಸನ್ಮಾನ

Update: 2024-02-12 17:41 IST

ಉಡುಪಿ, ಫೆ.12: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆಯ ವತಿಯಿಂದ ಇತ್ತೀಚೆಗೆ ಉಡುಪಿಯ ಮಣಿಪಾಲ್ ಇನ್ ಹೋಟೆಲ್‌ ನಲ್ಲಿ ಜರಗಿದ ಪದಗ್ರಹಣ ಸಮಾರಂಭದಲ್ಲಿ ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಸಮಿತಿಯ ಅಧೀನದಲ್ಲಿ ಕಾರ್ಕಳ ದಲ್ಲಿ ಕಾರ್ಯಚರಿಸುತ್ತಿರುವ ಎನ್.ಎಸ್. ಅಕಾಡೆಮಿಗೆ ಭೂಮಿ ಹಾಗೂ ಕಟ್ಟಡವನ್ನು ಉಚಿತವಾಗಿ ನೀಡಿರುವ ದಾನಿ ಹಾಗೂ ನಮ್ಮ ನಾಡ ಒಕ್ಕೂಟದ ಟ್ರಸ್ಟಿ ಕೆ.ಎಸ್.ಶಬ್ಬೀರ್ ಮೂಡಬಿದ್ರೆ ಅವರನ್ನು ಸನ್ಮಾನಿಸ ಲಾಯಿತು.

ಈ ಸಂದರ್ಭದಲ್ಲಿ ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಸಮಿತಿಯ ಅಧ್ಯಕ್ಷ ಮುಹಮ್ಮದ್ ಸಲೀಂ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಕೆ.ಅನ್ವರ್ ಪಾಷಾ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಿರಾಜ್, ಇಬ್ರಾಹಿಂ ಗೋವಾ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಲಕಿಸ್ಟರ್, ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ಬೆಳ್ವೆ ಮುಸ್ತಾಕ್ ಅಹಮದ್ ಬೆಳ್ವೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News