×
Ad

ಉದ್ಯಾವರ ಎಂಇಟಿ ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ

Update: 2024-02-12 17:43 IST

ಉಡುಪಿ: ಉದ್ಯಾವರ ಕೊರಂಗ್ರಪಾಡಿ ಎಂಇಟಿ ಆಂಗ್ಲ ಮಾಧ್ಯಮ ಶಾಲಾ ರಕ್ಷಕ ಶಿಕ್ಷಕ ಸಂಘ, ಎಂಇಟಿ ಅಲೂಮ್ನಿ ಅಸೋಸಿ ಯೇಷನ್, ಉದ್ಯಾವರ ಮುಸ್ಲಿಂ ಯಂಗ್‌ಮೆನ್ ಅಸೋಸಿಯೇಷನ್, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಇವುಗಳ ಸಹಯೋಗದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ನೇತೃತ್ವದಲ್ಲಿ ರಕ್ತದಾನ ಶಿಬಿರವನ್ನು ರವಿವಾರ ಎಂಇಟಿ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.

ರಕ್ತದಾನದ ಕುರಿತು ಶಾಲಾ ವಿದ್ಯಾರ್ಥಿಗಳು ಚಿತ್ರಿಸಿದ ಭಿತ್ತಿಚಿತ್ರವನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಎಂಇಟಿ ಶಾಲಾ ಅಧ್ಯಕ್ಷ ಹಾಜಿ ಅಬ್ದುಲ್ ಜಲೀಲ್, ಜಿಲ್ಲಾ ರಕ್ತನಿಧಿ ಕೇಂದ್ರದ ಸಂಯೋಜಕ ಡಾ.ಮಂಜುಶ್ರೀ, ಲಯನ್ಸ್ ಕ್ಲಬ್ ಲಕ್ಷ್ಯ ಇದರ ಅಧ್ಯಕ್ಷ ಧನುಷ್ ಕೆ., ಎಂವೈಎ ಅಧ್ಯಕ್ಷ ಇಮಾದ್, ಸಿದ್ದಿಕೆ ಅಕ್ಬರ್ ಜಾಮಿಯ ಮಸೀದಿ ಅಧ್ಯಕ್ಷ ಅಬ್ದುಲ್ ಸತ್ತಾರ್, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಇದರ ಸದಸ್ಯರಾದ ಮಹಾಬಲೇಶ್, ಕವನ ರವಿರಾಜ್, ರಮೇಶ್ ಕೆ.ಶೆಟ್ಟಿ, ಗ್ರಾಪಂ ಸದಸ್ಯರಾದ ಆಬಿದ್ ಅಲಿ, ರಿಯಾಜ್ ಪಳ್ಳಿ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಆಚಾರ್ಯ ವಹಿಸಿದ್ದರು. ಶಾಲಾ ಪಿಟಿಎ ಅಧ್ಯಕ್ಷ ಡಾ.ಮುಹಮ್ಮದ್ ಫೈಝಲ್ ರಕ್ತದಾನದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು. ಈ ಶಿಬಿರದಲ್ಲಿ ಸುಮಾರು 60 ಮಂದಿ ರಕ್ತದಾನ ಮಾಡಿದರು. ಶೈಕ್ಷಣಿಕ ಮುಖ್ಯಸ್ಥೆ ಜುನೈದಾ ಸುಲ್ತಾನ ರವರ ಮಾರ್ಗದರ್ಶನ ನೀಡಿದರು. ಮೊಯಿನ್ ಅನ್ವರ್ ಪ್ರಾರ್ಥಿಸಿದರು. ಶಿಕ್ಷಕಿ ಅಂಬ್ರಿನ್ ಸ್ವಾಗತಿಸಿದರು. ಶಿಕ್ಷಕಿ ಶಿಲ್ಪಾಕಾರ್ಯಕ್ರಮ ನಿರೂಪಿಸಿದರು. ಸಂಮ್ರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News