×
Ad

ಮುರ್ಡೇಶ್ವರ - ನಂದಿಕೂರು ನಡುವೆ ಹಳಿ ನಿರ್ವಹಣೆ: ರೈಲು ಸಂಚಾರದಲ್ಲಿ ವ್ಯತ್ಯಯ

Update: 2024-02-12 19:22 IST

ಉಡುಪಿ: ಫೆ.15ರ ಗುರುವಾರದಂದು ಕೊಂಕಣ ರೈಲು ಮಾರ್ಗದ ಮುರ್ಡೇಶ್ವರ-ಸೇನಾಪುರ ನಡುವೆ ಅಪರಾಹ್ನ 12 ರಿಂದ 3ರವರೆಗೆ ಹಾಗೂ ಉಡುಪಿ- ನಂದಿಕೂರು ನಡುವೆ ಅಪರಾಹ್ನ 12:15ರಿಂದ 2:15ರವರೆಗೆ ಮೂರು ಗಂಟೆಗಳ ಹಳಿಗಳ ನಿರ್ವಹಣಾ ಕಾರ್ಯ ನಡೆಯುವ ಕಾರಣ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಬೆಂಗಳೂರಿನ ಸರ್ ಎಂ.ವಿಶ್ವೇಶ್ವೇರಯ್ಯ ಟರ್ಮಿನಲ್ ಹಾಗೂ ಮುರ್ಡೇಶ್ವರ (ರೈಲು ನಂ.16585) ನಡುವೆ ಫೆ.14ರಂದು ಬೆಂಗಳೂರಿನಿಂದ ಹೊರಡುವ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಕುಂದಾಪುರದಲ್ಲಿ ಕೊನೆಗೊಳಿಸಲಾ ಗುವುದು. ಅಂದು ಈ ರೈಲು ಕುಂದಾಪುರ ಹಾಗೂ ಮುರ್ಡೇಶ್ವರ ನಡುವೆ ಸಂಚರಿಸುವುದಿಲ್ಲ.

ಅದೇ ರೀತಿ ರೈಲು ನಂ.16586 ಮುರ್ಡೇಶ್ವರ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಫೆ.15ರ ತನ್ನ ಪ್ರಯಾಣವನ್ನು ಕುಂದಾಪುರದಿಂದ ಪ್ರಾರಂಭಿಸಲಿದೆ. ಅಂದಿನ ಅದರ ಮುರ್ಡೇಶ್ವರ ಹಾಗೂ ಕುಂದಾಪುರ ನಡುವಿನ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಅದೇ ರೀತಿ ಕೊಚ್ಚುವೇಲಿ-ಲೋಕಮಾನ್ಯ ತಿಲಕ್ ಮುಂಬೈ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿನ ಫೆ.15ರ ಸಂಚಾರ ವನ್ನು ಮಂಗಳೂರು ಜಂಕ್ಷನ್‌ನಲ್ಲಿ ಒಂದು ಗಂಟೆ ತಡೆಹಿಡಿಯಲಾಗುವುದು ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News