ಪಡುಬಿದ್ರಿ: ಟಿಪ್ಪರ್ ಲಾರಿಯ ಟಯರ್, ಬ್ಯಾಟರಿ ಕಳವು
Update: 2024-02-12 21:14 IST
ಪಡುಬಿದ್ರಿ, ಫೆ.12: ತೆಂಕ ಎರ್ಮಾಳ್ ಗ್ರಾಮದ ಕಾಮತ್ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಟಿಪ್ಪರ್ ಲಾರಿಯ ಟಯರ್, ಬ್ಯಾಟರಿ ಕಳವು ಮಾಡಿರುವ ಘಟನೆ ಫೆ.11ರಂದು ರಾತ್ರಿ ವೇಳೆ ನಡೆದಿದೆ.
ಶಾಶ್ವತ್ ಎಂಬವರು ತನ್ನ ಮನೆಯ ಮನೆಯ ಬಳಿ ನಿಲ್ಲಿಸಿದ್ದ ಟಿಪ್ಪರ್ ಲಾರಿಯನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿ, ಪಾಂಗಾಳದ ಸೇತುವೆ ಬಳಿ ನಿಲ್ಲಿಸಿ, ಅದರ ಡಿಸ್ಕ್ ಸಮೇತ 5 ಟಯರ್ ಮತ್ತು ಬ್ಯಾಟರಿಯನ್ನು ಕಳವು ಮಾಡಿರುವುದಾಗಿ ದೂರಲಾಗಿದೆ. ಕಳವಾದ ಸೊತ್ತಿನ ಮೌಲ್ಯ 98,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.