ಚಾರ ಗ್ರಾಪಂ ಕಚೇರಿಯ ಗಾಜು ಒಡೆದು ಹಾನಿ: ಪ್ರಕರಣ ದಾಖಲು
Update: 2024-02-13 21:48 IST
ಹೆಬ್ರಿ, ಫೆ.13: ಚಾರ ಗ್ರಾಮ ಪಂಚಾಯತ್ ಕಚೇರಿಯ ಗಾಜು ಒಡೆದು ಹಾಕಿ ಸಾವಿರಾರು ರೂ. ನಷ್ಟ ಉಂಟು ಮಾಡಿರುವ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾರ ಗ್ರಾಮದ ಉದಯ ಎಂಬಾತ ಜ.27ರಂದು ರಾತ್ರಿ ಮತ್ತು ಫೆ.10ರಂದು ರಾತ್ರಿ ಚಾರ ಗ್ರಾಪಂ ಕಚೇರಿಯ ಆವರಣಕ್ಕೆ ಬೈಕಿನಲ್ಲಿ ಬಂದು ಕಚೇರಿ ಎದುರಿನ ಎರಡು ಗ್ಲಾಸ್‌ಗಳನ್ನು ಒಡೆದು ಹಾಕಿ ಸುಮಾರು 5000ರೂ. ನಷ್ಟ ಉಂಟು ಮಾಡಿ ರುವುದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಖಾ ದೂರಿನಲ್ಲಿ ತಿಳಿಸಿದ್ದಾರೆ.