ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ
Update: 2024-02-13 21:51 IST
ಉಡುಪಿ: ಬಾಗಲಕೋಟೆ ಮೂಲದ ಪುತ್ತೂರು ಗ್ರಾಮದ ನಿಟ್ಟೂರಿನ ಬಾಡಿಗೆ ಮನೆ ನಿವಾಸಿ ಯಲ್ಲವ್ವ ಕುಚಲ ಎಂಬವರ ಮಗ ವಿನೋದ ಕೂಚಲ(19) ಎಂಬಾತ ಫೆ.8ರಂದು ಸ್ನೇಹಿತನ ಮನೆಗೆ ಹೋಗುವುದಾಗಿ ಹೇಳಿ ಹೋದವನು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜೆಕಾರು: ಕಳೆದ ಕೋವಿಡ್ ಲಾಕಡೌನ್ ಸಮಯದಲ್ಲಿ ಬೆಂಗಳೂರಿನಿಂದ ಮನೆಗೆ ಬಂದು ಮೂರು ವರ್ಷಗಳಿಂದ ಊರಿ ನಲ್ಲಿಯೇ ಇದ್ದ ಮರ್ಣೆ ಗ್ರಾಮದ ಕಾಡುಹೊಳೆ ನಿವಾಸಿ ಶ್ರೀಧರ ಎಂಬವರ ಮಗ ಸತ್ಯಈಶ (46) ಎಂಬವರು ನ.7ರಂದು ಧರ್ಮಸ್ಥಳಕ್ಕೆ ಹೋಗುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.