ಸಿಮೆಂಟ್ ಮಿಕ್ಸರ್ ವಾಹನ ಢಿಕ್ಕಿ: ಸೂಪರ್ ವೈಸರ್ ಮೃತ್ಯು
Update: 2024-02-15 22:37 IST
ಅಜೆಕಾರು : ಪಡುಕುಡೂರು ಗ್ರಾಮದ ಭದ್ರಕಾಳಿ ದೇವಸ್ಥಾನದ ಬಳಿ ಫೆ.14ರಂದು ಸಂಜೆ ವೇಳೆ ರಸ್ತೆ ನಿರ್ಮಾಣ ಕಾಮಗಾರಿಗೆ ಬಳಸುತ್ತಿದ್ದ ಸಿಮೆಂಟ್ ಮಿಕ್ಸರ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಕಾಮಗಾರಿ ಕಂಪೆನಿಯ ಸೂಪರ್ ವೈಸರ್ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಭಾಷಿ ವೈ. ಎಂದು ಗುರುತಿಸಲಾಗಿದೆ. ದುರ್ಗಾ ಕನ್ಸಟ್ರಕ್ಷನ್ ಕಂಪನಿ ಪಡುಕುಡೂರು ಗ್ರಾಮದ ಕೊಡಮಣಿ ತ್ತಾಯ ದೇವಸ್ಥಾನವರೆಗಿನ ಮುಖ್ಯ ರಸ್ತೆಯ ಕಾಮಗಾರಿಯನ್ನು ನಿರ್ವಹಿಸುತ್ತಿದ್ದು, ಈ ವೇಳೆ ಸಿಮೆಂಟ್ ಮಿಕ್ಸರ್ ವಾಹನ ವನ್ನು ಚಾಲಕ ಹಿಂದಕ್ಕೆ ಚಲಾಯಿಸಿ, ರಸ್ತೆಯಲ್ಲಿ ನಿಂತಿದ್ದ ಕಂಪನಿಯ ಸೂಪರವೈಸರ್ ಭಾಷಿ ವೈಗೆ ಡಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರಿಂದ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಅವರು, ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.