×
Ad

ಪಣಿಯಾಡಿ ಪ್ರಶಸ್ತಿಗೆ ತುಳು ಕಾದಂಬರಿಗಳ ಹಸ್ತಪ್ರತಿ ಆಹ್ವಾನ

Update: 2024-02-17 18:06 IST

ಉಡುಪಿ, ಫೆ.17: ತುಳುಕೂಟ ಉಡುಪಿ ವತಿಯಿಂದ ನೀಡಲಾಗುವ ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು 8,000 ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಹಸ್ತಪ್ರತಿಯು ಇದುವರೆಗೆ ಯಾವುದೇ ಪ್ರಶಸ್ತಿ, ಬಹುಮಾನಕ್ಕೆ ಆಯ್ಕೆಯಾಗದ, ಮುದ್ರಿತವಾಗದ, ಕ್ರೌನ್ 1/8 ಆಕಾರದಲ್ಲಿ 120 ಪುಟ ಮೀರುವ ಕೃತಿಯಾಗಿರಬೇಕು. ತುಳುನಾಡಿನ ಭೌಗೋಳಿಕ ಚಿತ್ರಣ, ತುಳು ಸಂಸ್ಕೃತಿಯನ್ನು ಬಿಂಬಿಸುವ ಅಂಶಗಳಿಂದ ಕೂಡಿದ್ದು, ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ ವಸ್ತು ಆಧರಿಸಿರಬೇಕು.

ಹಸ್ತಪ್ರತಿಗಳನ್ನು ಮಾರ್ಚ್ 30ರೊಳಗೆ ತಾರಾ ಉಮೇಶ್ ಆಚಾರ್ಯ, ಪಣಿಯಾಡಿ ಪ್ರಶಸ್ತಿ ಸಂಚಾಲಕಿ, ‘ವೆಂಕಟರಮಣ’ ಕಲ್ಮಂಜೆ, ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ, ಮಣಿಪುರ ಪೋಸ್ಟ್, ಉಡುಪಿ ಜಿಲ್ಲೆ- 576120. ಈ ವಿಳಾಸಕ್ಕೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ತುಳುಕೂಟ ಉಡುಪಿ ಕಾರ್ಯದರ್ಶಿ ಗಂಗಾಧರ ಕಿದಿಯೂರು ಇವರನ್ನು (9844532629) ಸಂಪರ್ಕಿಸಬಹುದು ಎಂದು ತುಳುಕೂಟ ಉಡುಪಿ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News