ಯುವ ಜನತೆಗೆ ಉಡುಪಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ
Update: 2024-02-17 18:18 IST
ಉಡುಪಿ: ನೆಹರು ಯುವ ಕೇಂದ್ರ ವತಿಯಿಂದ ಜಿಲ್ಲೆಯ 18 ರಿಂದ 25 ವರ್ಷದೊಳಗಿನ ಯುವಕ-ಯುವತಿಯರಿಗೆ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ಸಂಸತ್ ಉತ್ಸವ (ನೇಶನಲ್ ಯೂತ್ ಪಾರ್ಲಿಮೆಂಟ್ ಫೆಸ್ಟಿವಲ್)-2024 ಎಂಬ ವಿಷಯದ ಕುರಿತು ಭಾಷಣ ಸ್ಪರ್ದೆಯನ್ನು ಆಯೋಜಿಸಲಾಗಿದೆ.
ಭಾಷಣಕ್ಕೆ 5 ನಿಮಿಷಗಳ ಕಾಲಾವಕಾಶವಿದ್ದು, ಹಿಂದಿ, ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಬಾಷಣ ಮಾಡಬಹುದಾ ಗಿದೆ. ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಯು ಆನ್‌ಲೈನ್, ವರ್ಚುವಲ್ ಮೂಲಕ ನಡೆಯಲಿದೆ. ರಾಷ್ಟ್ರಮಟ್ಟದಲ್ಲಿ ಅಗ್ರ ಮೂವರು ವಿಜೇತರಿಗೆ ಕ್ರಮವಾಗಿ 2 ಲಕ್ಷ ರೂ., 1.50 ಲಕ್ಷ ಮತ್ತು ಒಂದು ಲಕ್ಷ ರೂ.ನಗದು ಬಹುಮಾನ ಮತ್ತು ತಲಾ 50,000 ರೂ.ಗಳ ಎರಡು ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
ನೋಂದಣಿ ಮಾಡಲು ಫೆಬ್ರವರಿ 21 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನೆಹರು ಯುವ ಕೇಂದ್ರ ಅಧಿಕಾರಿಗಳ ದೂ.ಸಂ: 0820-2574992, ಮೊ.ನಂ. 9901502622ನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.