ಪಾಂಡುರಂಗ ಶಾನುಭಾಗ್‌ಗೆ ‘ಸೇವಾಭೂಷಣ’ ಪ್ರಶಸ್ತಿ
Update: 2024-02-18 21:55 IST
ಉಡುಪಿ, ಫೆ.18: ಯಕ್ಷಗಾನ ಕಲಾರಂಗದಲ್ಲಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ಸಂಸ್ಥೆ ನೀಡುವ ಸೇವಾ ಭೂಷಣ ಪ್ರಶಸ್ತಿಗೆ ಈ ಬಾರಿ ನಿವೃತ್ತ ಬ್ಯಾಂಕ್ ಉದ್ಯೋಗಿ, ದೃಷ್ಟಿ ತೊಡಕನ್ನೂ ಮೀರಿ ನಿಂತ ಸಾಧಕ, ಸಾವಯವ ಕೃಷಿಕ ಪಾಂಡುರಂಗ ಶಾನುಭಾಗ್ ಆಯ್ಕೆಗೊಂಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಫೆ.24ರ ಶನಿವಾರ ಸಂಜೆ 5:00ಕ್ಕೆ ಪೇಜಾವರ ಮಠದ ಶ್ರೀರಾಮಠಲ ಸಭಾಭವನದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥರ ಅನುಗ್ರಹದೊಂದಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಜರಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.