ಡಿಕೆಎಸ್‌ಸಿ ಕುವೈತ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆ
ಯುಸೂಫ್ - ಲಿಯಾಕತ್
ಉಡುಪಿ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ಡಿಕೆಎಸ್‌ಸಿ) ಇದರ ಕುವೈತ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಾಲ್ಮೀಯಾ ಸುನ್ನಿ ಸೆಂಟರ್ ಸಭಾಂಗಣದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಡಿಕೆಎಸ್‌ಸಿ ಕುವೈಟ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಯೂಸುಫ್ ಅಬ್ಬಾಸ್ ವಹಿಸಿದ್ದರು. ಡಿಕೆಎಸ್‌ಸಿ ದಮ್ಮಾಮ್ ವಲಯ ಅಧ್ಯಕ್ಷ ಅಬ್ದುಲ್ ರಹ್ಮಾನ್ ಪಾಣಾಜೆ ಮತ್ತು ಕುವೈತ್ ಇದರ ರಾಯಭಾರಿ ಅಬ್ದುಲ್ ಅಝೀಝ್ ಮೂಳೂರು ವೀಕ್ಷಕಾರಗಿ ಆಗಮಿಸಿದ್ದರು.
ಡಿಕೆಎಸ್‌ಸಿ ಕುವೈತ್ ರಾಷ್ಟ್ರೀಯ ಸಮಿತಿಯ ಗೌರವಾಧ್ಯಕ್ಷ ಶಫೀಕ್ ಅಕ್ಸನಿ ಉಸ್ತಾದ್ ದುವಾ ನೆರವೇರಿಸಿದರು. ಸಾಬಿಕ್ ಕಿರಾಅತ್ ಪಠಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲಿಯಾಕತ್ ಅಲಿ ಗಂಗಾವಳಿ ಸ್ವಾಗತಿಸಿದರು.
ಸಭೆಯನ್ನು ಶಫೀಕ್ ಅಹ್ಸನಿ ಉಸ್ತಾದ್ ಉದ್ಘಾಟಿಸಿದರು. ಸಂಘಟನಾ ಕಾರ್ಯದರ್ಶಿ ಇಂತಿಯಾಝ್ ಸೂರಿಂಜೆ ವಾರ್ಷಿಕ ವರದಿ ಮತ್ತು ಕೋಶಾಧಿಕಾರಿ ಅಬ್ದುಲ್ ಲತೀಫ್ ಶೇಡಿಯ ಆಯವ್ಯಯ ವರದಿಯನ್ನು ಮಂಡಿಸಿದರು.
ಮುಖ್ಯ ಅತಿಥಿಯಾಗಿ ಅಬ್ದುಲ್ ರಹಿಮಾನ್ ಪಾಣಾಜೆ, ಕುವೈತ್ ರಾಷ್ಟ್ರೀಯ ಸಮಿತಿಯ ಕೇಂದ್ರ ರಾಯಭಾರಿ ಅಬ್ದುಲ್ ಅಝೀಝ್ ಮೂಳೂರು ಅವರನ್ನು ಸನ್ಮಾನಿಸಲಾಯಿತು. 2024ನೇ ಸಾಲಿನ ಆಡಳಿತ ಹಾಗೂ ಕಾರ್ಯಕಾರಿ ಸಮಿತಿ ಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಯೂಸುಫ್ ಅಬ್ಬಾಸ್ ಬಾರೂದ್, ಗೌರವಾಧ್ಯಕ್ಷರಾಗಿ ಉಸ್ತಾದ್ ಅಬ್ದುಲ್ ರಹಿಮಾನ್ ಸಖಾಫಿ ಮತ್ತು ಉಸ್ತಾದ್ ಶಫೀಕ್ ಅಕ್ಸನಿ, ನಿರ್ದೇಶಕರುಗಳಾಗಿ ಅಬ್ದುಲ್ ರಹಿಮಾನ್ ಕಾನಾ, ಅಬ್ದುಲ್ ಕರೀಂ ಬೀರಲಿ, ಅಬ್ದುಲ್ ಲತೀಫ್ ಶೇಡಿಯಾ ಹಾಗೂ ಇಸ್ಮಾಯಿಲ್ ಉಚ್ಚಿಲ, ಕಾರ್ಯಾಧ್ಯಕ್ಷರುಗಳಾಗಿ ಅನ್ವರ್ ಸಾಹೇಬ್ ಕುಂಜಾಲ್ ಮತ್ತು ಶೌಕತ್ ಅಲಿ ಶಿರ್ವ, ಪ್ರಧಾನ ಕಾರ್ಯದರ್ಶಿಯಾಗಿ ಲಿಯಾಕತ್ ಅಲಿ ಗಂಗಾವಳಿ, ಕೋಶಾಧಿಕಾರಿ ಇಮ್ಮಿಯಾಝ್ ಸೂರಿಂಜೆ, ಮಾಧ್ಯಮ ಹಾಗೂ ಸಂವಹನ ಕಾರ್ಯದರ್ಶಿಯಾಗಿ ತೌಫೀಕ್ ಅಲಿ, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಯೂಸುಫ್ ಮುನಿಯಂ, ಮುಹಮ್ಮದ್ ಇಕ್ಬಾಲ್ ಕಂದಾವರ, ಹೈದರ್ ಉಚ್ಚಿಲ, ಮುಬೀನ್ ಸಾಸ್ತಾನ, ಜೊತೆ ಕಾರ್ಯದರ್ಶಿಗಳಾಗಿ ಫೈಝಲ್ ಕಾಪು, ಶಂಸುದ್ದೀನ್ ಶಾಬಾನ್ ಉಚ್ಚಿಲ ಅವರನ್ನು ಆಯ್ಕೆ ಮಾಡಲಾಯಿತು.
ಮುಹಮ್ಮೆದ್ ಯೂಸುಫ್ ಮುನಿಯಂ ಕಾರ್ಯಕ್ರಮ ನಿರೂಪಿಸಿದರು ಶೌಕತ್ ಅಲಿ ಶಿರ್ವ ವಂದಿಸಿದರು.