ಜೀಪು ಢಿಕ್ಕಿ: ಪಾದಚಾರಿ ಮೃತ್ಯು
Update: 2024-02-19 20:36 IST
ಶಿರ್ವ, ಫೆ.19: ಜೀಪೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತ್ತಿಯೊಬ್ಬರು ಮೃತಪಟ್ಟ ಘಟನೆ ಬೆಳಪು ಮಧುರ ಸ್ಟೋರ್ ಬಳಿ ಫೆ.18ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಬೆಳಪು ಗ್ರಾಮದ ಮನೋಜ್(44) ಎಂದು ಗುರುತಿಸಲಾಗಿದೆ. ಮನೆಯಿಂದ ಬೆಳಪು ಕಡೆಗೆ ಹೋಗುತ್ತಿದ್ದ ಮನೋಜ್‌ಗೆ ಬೆಳಪು ಕಡೆಯಿಂದ ಪಕೀರಣಕಟ್ಟೆ ಕಡೆಗೆ ಬರುತ್ತಿದ್ದ ಜೀಪು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರ ವಾಗಿ ಗಾಯಗೊಂಡ ಮನೋಜ್, ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.