×
Ad

ಯುವನಿಧಿ ಯೋಜನೆ: ಅರ್ಜಿ ಆಹ್ವಾನ

Update: 2024-02-20 21:05 IST

ಉಡುಪಿ: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯಡಿ 2023ರಲ್ಲಿ ತೇರ್ಗಡೆಯಾದ ಪದವೀಧರರು, ಎಲ್ಲಾ ಸ್ನಾತಕೋತ್ತರ ಪದವೀಧರರು, ಎಂ.ಎಚ್.ಡಿ, ಎಂ.ಪಿ.ಎಲ್, ಪಿ.ಹೆಚ್‌ಡಿ, ನರ್ಸಿಂಗ್ ಹಾಗೂ ಪ್ಯಾರಮೆಡಿಕಲ್ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ - https://sevasindhugs.karnataka.gov.in- ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಪದವೀಧರರಿಗೆ ಮಾಸಿಕ 3000 ರೂ ಹಾಗೂ ಡಿಪ್ಲೋಮಾದವರರಿಗೆ 1500 ರೂ ಯುವನಿಧಿ ಯೋಜನೆಯಡಿ ಫಲಾನುಭವಿ ಗಳಿಗೆ ಹಣ ಸಂದಾಯವಾಗಲಿದೆ. ಫಲಾನುಭವಿಗಳು ತಿಂಗಳ ಅಂತ್ಯದಲ್ಲಿ ದಿ.25ರಿಂದ 01ರ ಒಳಗೆ ಉದ್ಯೋಗ ದೊರಕಿದೆ ಅಥವಾ ಇಲ್ಲ ಎಂದು ಸೇವಾ ಸಿಂಧು ಪೋರ್ಟಲ್ ಮೂಲಕ ಸ್ವಯಂ ಘೋಷಣೆ ನೀಡುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News