×
Ad

ಉಡುಪಿ: ಕಟ್ಟಡ ಮಾಲಕರು ಸುಂಕ ಪಾವತಿಸಲು ಸೂಚನೆ

Update: 2024-02-20 21:55 IST

ಉಡುಪಿ, ಫೆ.20: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1996 ಮತ್ತು ಕರ್ನಾಟಕ ನಿಯಮಗಳು 2006ರಡಿ 10ಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಲ್ಲಿ ಕಡ್ಡಾಯವಾಗಿ ಕಟ್ಟಡ ಮಾಲಕರು, ನಿಯೋಜಕರು ಹಾಗೂ ಗುತ್ತಿಗೆದಾ ರರು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸಂಸ್ಥೆಯನ್ನಾಗಿ ನೊಂದಾಯಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕವನ್ನು ಭರಿಸಿ, ನೋಂದಣಿ ಪ್ರಮಾಣಪತ್ರವನ್ನು ಕಾರ್ಮಿಕ ಇಲಾಖೆಯಿಂದ ಪಡೆಯುವುದು ಕಡ್ಡಾಯ ವಾಗಿದೆ.

ವ್ಯಾಸ್ತವ್ಯದ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ 10 ಲಕ್ಷ ರೂ. ನಿರ್ಮಾಣ ವೆಚ್ಚ ಮೀರಿದ ಕಟ್ಟಡ ಮತ್ತು ಯಾವುದೇ ವಾಣಿಜ್ಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುವ ಕಟ್ಟಡದ ಮಾಲಕರು ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಸ್ಥಳೀಯ ಸಂಸ್ಥೆಯ ಪರವಾನಗಿ ಪ್ರಾಧಿಕಾರ ಕಛೇರಿಗಳಿಂದ ವಾಸ್ತವ್ಯದ ಸರ್ಟಿಫಿಕೇಟನ್ನು ಕಟ್ಟಡದ ನಿರ್ಮಾಣ ಮಾಲಕರು ಪಡೆಯುವ ಪೂರ್ವದಲ್ಲಿ ಕಾರ್ಮಿಕ ಅಧಿಕಾರಿ ಹಾಗೂ ಸುಂಕ ಮೌಲ್ಯಮಾಪನಾಧಿಕಾರಿಗಳಿಗೆ ಕಟ್ಟಡದ ಮಾಲಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಸುಂಕ ಕಾಯ್ದೆಯನ್ವಯ ನಮೂನೆ-1 ಹಾಗೂ ನಮೂನೆ-4ರಲ್ಲಿ ಭರ್ತಿ ಮಾಡಿದ ಮಾಹಿತಿ ಹಾಗೂ ಅಗತ್ಯ ದಾಖಲಾತಿಯನ್ನು ಸಲ್ಲಿಸಬೇಕು.

ಅಲ್ಲದೇ, ಸುಂಕ ಮೌಲ್ಯಮಾಪನ ಆದೇಶ ಮಾಡಿಸಿಕೊಂಡು ಸುಂಕದ ಪೂರ್ಣ ಮೊತ್ತ ಪಾವತಿ ಮಾಡಿರುವ ಬಗ್ಗೆ ದೃಢ ಪತ್ರವನ್ನು ಪಡೆದು ಸ್ಥಳೀಯ ಸಂಸ್ಥೆಯ ಪರವಾನಗಿ ಪ್ರಾಧಿಕಾರ ಕಚೇರಿಗಳಿಂದ ವಾಸ್ತವ್ಯದ ಸರ್ಟಿಫಿಕೇಟನ್ನು ಪಡೆದು ಕೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News