ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಚುನಾವಣಾ ಸಮಾಲೋಚನಾ ಸಭೆ
ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಚುನಾವಣೆ ಸಂಬಂಧ ಜಿಲ್ಲೆಯ ವಿವಿಧ ಬ್ಲಾಕ್ ಅಧ್ಯಕ್ಷರುಗಳ ಸಮಾಲೋಚನಾ ಸಭೆಯು ಉಡುಪಿ ನಗರದ ಖಾಸಗಿ ಹೊಟೇಲೊಂದರ ಸಭಾಂಗಣದಲ್ಲಿ ಗುರುವಾರ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ರವರು ಪ್ರಸ್ತಾವಿಕ ವಾಗಿ ಮಾತನಾಡಿ ಲೋಕಸಭೆಮ ಜಿಲ್ಲಾ ಪಂಚಾಯಿತಿಮ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಯಶಸ್ವಿಯಾಗಿ ಎದುರಿ ಸಲು ಬೇಕಾದ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಅವಕಾಶ ಇದೆ. ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶಕ್ಕೆ ಜಿಲ್ಲೆಯಿಂದ ಕಾರ್ಯ ಕರ್ತರು ಸಕ್ರೀಯರಾಗಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಜನರಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿದೆ. ಆದಷ್ಟು ಶೀಘ್ರ ಬಿಎಲ್‌ಎ-2 ನೇಮಕಾತಿ ನಡೆಯಬೇಕು ಎಂದು ತಿಳಿಸಿದರು.
ಉಡುಪಿ ಜಿಲ್ಲಾ ಬಿಎಲ್‌ಎ-2 ಉಸ್ತುವಾರಿ ವೆರೋನಿಕಾ ಕರ್ನೆಲಿಯೋ ಮಾತನಾಡಿ, ಕ್ರೀಯಾಶೀಲರಲ್ಲದ ಬಿಎಲ್‌ಎ 2ರವರನ್ನು ಬದಲಾಯಿಸುವ ಅವಕಾಶವಿದೆ. ಫೆ.27ರಂದು ಬಿಎಲ್‌ಎ-2ಗಳ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದರು.
ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಪೂರ್, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುಖಂಡರಾದ ನೀರೆ ಕೃಷ್ಣ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ದಿನೇಶ್ ಪುತ್ರನ್, ಹರೀಶ್ ಕಿಣಿ, ಭಾಸ್ಕರ್ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ್, ಬ್ಲಾಕ್ ಅಧ್ಯಕ್ಷರುಗಳಾದ ಹರಿಪ್ರಸಾದ್ ಶೆಟ್ಟಿ ಕುಂದಾಪುರ, ಶಂಕರ್ ಕುಂದರ್ ಕೋಟ, ಪ್ರದೀಪ್ ಕುಮಾರ್ ಶೆಟ್ಟಿ ವಂಡ್ಸೆ, ಅರವಿಂದ್ ಪೂಜಾರಿ ಬೈಂದೂರು, ರಮೇಶ್ ಕಾಂಚನ್ ಉಡುಪಿ, ನವೀನ್ ಚಂದ್ರ ಸುವರ್ಣ ಕಾಪು, ಸಂತೋಷ ಕುಲಾಲ್ ಕಾಪು ಉತ್ತರ, ಚಂದ್ರಶೇಖರ್ ಬಾಯರಿ ಹೆಬ್ರಿ, ದಿನಕರ ಹೇರೂರು ಬ್ರಹ್ಮಾವರ, ಸದಾಶಿವ ದೇವಾಡಿಗ ಕಾರ್ಕಳ ಉಪಸ್ಥಿತರಿದ್ದರು.