ಉಡುಪಿ ಸ್ವಚ್ಛತಾ ಕಾಯ೯ಕ್ಕೆ ತಾತ್ಕಾಲಿಕವಾಗಿ ನಿಯೋಜನೆಗೊಂಡ ಪೌರ ಕಾಮಿ೯ಕರ ಮರು ನಿಯೋಜನೆಗೆ ಆಗ್ರಹ
ಬೈಂದೂರು: ಉಡುಪಿ ಪಯಾ೯ಯೋತ್ಸದ ಸ್ವಚ್ಛತಾ ಕಾಯ೯ಕ್ಕೆ ತಾತ್ಕಾಲಿಕವಾಗಿ ನಿಯೋಜನೆಗೊಂಡ ಬೈಂದೂರಿನ ಪೌರ ಕಾಮಿ೯ಕರನ್ನು ಮರು ನಿಯೋಜನೆಗೊಳಿಸಬೇಕು ಎಂದು ಅಖಿಲ ಭಾರತ ಕೃಷಿಕೂಲಿಕಾರರ ಸಂಘ(AIAWU)ದ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೆಂಕಟೇಶ ಕೋಣಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಬೈಂದೂರು ಪಟ್ಟಣ ಪಂಚಾಯತ್ ನಿಂದ 20 ಪೌರಕಾಮಿ೯ಕರನ್ನು ಉಡುಪಿಯ ಪಯಾ೯ಯೋತ್ಸವ ನಿಮಿತ್ತ ಸ್ವಚ್ಛತಾ ಕಾಯ೯ಕ್ಕೆ ಉಡುಪಿ ನಗರ ಸಭೆಯಲ್ಲಿ ಕತ೯ವ್ಯ ನಿವ೯ಹಿಸಲು ಉಡುಪಿ ಜಿಲ್ಲಾಧಿಕಾರಿ ಜನವರಿ ತಿಂಗಳ ಮೊದಲೇ ನಿಯೋಜನೆ ಮಾಡಿ ಆದೇಶ ಹೊರಡಿಸಿದ್ದರು. ಬೈಂದೂರು ಪಟ್ಟಣ ಪಂಚಾಯತ್ ಭೌಗೋಳಿಕವಾಗಿ ವಿಸ್ತಾರವಾದ 4 ಗ್ರಾಮ ಗಳ ವ್ಯಾಪ್ತಿಗೆ ಸೇರುತ್ತದೆ. ಇಲ್ಲಿಯ ಸ್ವಚ್ಛತಾ ಕಾಯ೯ಕ್ಕೆ ಕೇವಲ ಬೆರಳೆಣಿಕೆಯಷ್ಟೆ ಪೌರ ಕಾಮಿ೯ಕರು ಇದ್ದು, ಕೆಲಸದ ಒತ್ತಡ ಹೆಚ್ಚಿದೆ.
ಇದೀಗ ಉಡುಪಿ ಪಯಾ೯ಯೋತ್ಸವ ಮುಗಿದು ಹಲವಾರು ತಿಂಗಳು ಕಳೆದರೂ ತಾತ್ಕಾಲಿಕ ನೆಲೆಯಲ್ಲಿ ಉಡುಪಿಗೆ ಸ್ವಚ್ಛತಾ ಕತ೯ವ್ಯಕ್ಕೆ ನಿಯೋಜಿಸಿದ ಪೌರ ಕಾಮಿ೯ಕರು ವಾಪಸ್ಸು ಬರಲೇ ಇಲ್ಲ. ಇದರಿಂದಾಗಿ ಬೈಂದೂರು ಸ್ವಚ್ಚತೆ ಕಾಣದೆ ನಗರ ನೈಮ೯ಲ್ಯ ಇಲ್ಲದಂತಾಗಿದೆ. ತಾತ್ಕಾಲಿಕವಾಗಿ ಉಡುಪಿಗೆ ನಿಯೋಜಿಸಿದ 20 ಪೌರ ಕಾಮಿ೯ಕರನ್ನು ಬೈಂದೂರು ಪಟ್ಟಣ ಪಂಚಾಯತ್ ಗೆ ಮರು ನಿಯೋಜನೆ ಮಾಡಲು ಕ್ರಮವಹಿಸಬೇಕು. ಈ ಬೇಡಿಕೆಯನ್ನು ಕೂಡಲೇ ಈಡೇರಿಸದಿದ್ದರೆ ಸ್ಥಳಿಯ ನಾಗರಿಕರೊಡನೆ ಮೂಲ ಸೌಕಯ೯ದ ಹಕ್ಕಿಗಾಗಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.