ಆಯುರ್ವೇದ ಬೆಳೆಸುವಲ್ಲಿ ಸ್ಥಳೀಯ ತಜ್ಞರ ಕೊಡುಗೆ ಅಪಾರ: ಡಾ.ಶ್ರೀನಿವಾಸಲು
ಉಡುಪಿ: ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಉಳಿಸಿ ಬೆಳೆಸುವಲ್ಲಿ ಸ್ಥಳೀಯ ಆಯುರ್ವೇದ ತಜ್ಞರ ಕೊಡುಗೆ ಅಪಾರವಾ ಗಿದೆ ಎಂದು ಕರ್ನಾಟಕ ಸರಕಾರದ ಆಯುಷ್ ಆಯುಕ್ತ ಡಾ.ಶ್ರೀನಿವಾಸಲು ಕೆ. ಹೇಳಿದ್ದಾರೆ.
ಉಡುಪಿ ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕ್ರಿಯಾ ಶರೀರ ವಿಭಾ ಗದ ವತಿಯಿಂದ ಶ್ರೀ ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮರಣಾರ್ಥವಾಗಿ ಕಾಲೇಜಿನ ಸಭಾಂಗಣ ದಲ್ಲಿ ಶನಿವಾರ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಅಗ್ನಿಮಂಥನ- 2024 ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಿದ್ಯಾರ್ಥಿಗಳು ಆಯುರ್ವೇದ ಪದ್ಧತಿಯ ಭವಿಷ್ಯವಾಗಿದ್ದು, ಈ ಪದ್ಧತಿಯ ಏಳಿಗೆಯ ಹೊಣೆಹೊತ್ತವರಾಗಿದ್ದಾರೆ. ಆಯು ರ್ವೇದ ಶೈಕ್ಷಣಿಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಮಹತ್ತರ ಪಾತ್ರವಹಿಸಿದ್ದು, ಜನ ಸಾಮಾನ್ಯರಿಗೂ ಆಯುರ್ವೇದದ ಕಂಪು ಬೀರುವಲ್ಲಿ ಸಫಲತೆಯನ್ನು ಪಡೆದಿವೆ ಎಂದರು.
ಉಡುಪಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕ್ರಿಯಾ ಶಾರೀರ ವಿಭಾಗದಿಂದ ಧನಂಜಯ ಸಂಶೋಧನ ಪ್ರಬಂಧಗಳ ಕಿರು ಹೊತ್ತಿಗೆಯನ್ನು ಅನಾವರಣ ಗೊಳಿಸಲಾಯಿತು. ಅಧ್ಯಕ್ಷತೆ ಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ವಹಿಸಿದ್ದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ ಎಸ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ.ಸುಧೀಂದ್ರ ಆರ್. ಮೊಹರೇರ್ ವಂದಿಸಿದರು. ರೋಗ ನಿದಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅರುಣ್ ಕುಮಾರ್ ಹಾಗೂ ಕೌಮಾರಭೃತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಕಾವ್ಯ ಕಾರ್ಯಕ್ರಮ ನಿರೂಪಿಸಿದರು.
ತದನಂತರ ಸಂಪನ್ಮೂಲ ವ್ಯಕ್ತಿಗಳಾದ ನವದೆಹಲಿಯ ರಾಷ್ಟ್ರೀಯ ಆಯುರ್ವೇದ ಗುರು ವೈದ್ಯ ಉಪೇಂದ್ರ ದೀಕ್ಷಿತ್, ಕಣ್ಣೂರು ಸರಕಾರಿ ಆಯುರ್ವೇದ ಕಾಲೇಜಿನ ಶರೀರ ಕ್ರಿಯಾ ವಿಭಾಗದ ಪ್ರಾಧ್ಯಾಪಕ ಡಾ.ಅನಂತ ಲಕ್ಷ್ಮಿ, ಹಾಗೂ ಉಡುಪಿ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ರೋಗ ನಿದಾನ ವಿಭಾಗದ ಸಹಪ್ರಾಧ್ಯಾಪಕ ಡಾ.ಪ್ರಸನ್ನ ಎನ್. ಮೊಗಸಾಲೆ ವೈಜ್ಞಾನಿಕ ಉಪನ್ಯಾಸ ನೀಡಿದರು. ರಾಷ್ಟ್ರಾದ್ಯಂತ ವಿವಿಧ ಸಂಸ್ಥೆಗಳಿಂದ 400 ಪ್ರತಿನಿಧಿಗಳು ಆಗಮಿಸಿ, ಸುಮಾರು 250ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು ಮತ್ತು ಭಿತ್ತಿಪತ್ರಗಳನ್ನು ಮಂಡಿಸಿದರು.