×
Ad

ಪ್ರತ್ಯೇಕ ಪ್ರಕರಣ: ನಾಲ್ವರು ನಾಪತ್ತೆ

Update: 2024-02-24 20:38 IST

ಬ್ರಹ್ಮಾವರ: ವಾರಂಬಳ್ಳಿ ಗ್ರಾಮದ, ಅಪ್ಪ-ಅಮ್ಮ ಅನಾಥಾಲಯದಲ್ಲಿ ಎರಡು ತಿಂಗಳಿನಿಂದ ಆಶ್ರಯದಲ್ಲಿದ್ದ ಕಾಪು ನಿವಾಸಿ ರವಿ(51) ಎಂಬವರು ಫೆ.22ರಂದು ಬೆಳಗ್ಗೆ ಬಟ್ಟೆ ಒಗೆಯುತ್ತೇನೆ ಎಂದು ಹೇಳಿ ಬಟ್ಟೆಯನ್ನು ತೆಗೆದು ಕೊಂಡು ಹೊರಗೆ ಹೋದವರು ಕಂಪೌಂಡ್ ಹಾರಿ ಓಡಿ ಹೋಗಿ ನಾಪತ್ತೆ ಯಾಗಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರಿ: ಪಲಿಮಾರು ಗ್ರಾಮದ ಜಯ(55) ಎಂಬವರು ಫೆ.21ರಂದು ಸಂಜೆ ವೇಳೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯಿಂದ ಹೊರಗೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ: ಯಡಾಡಿ ಮತ್ಯಾಡಿ ಗ್ರಾಮದ ನಂದಿಕೇಶ್ವರ ದೇವಸ್ಥಾನಕ್ಕೆ ಫೆ.22ರಂದು ಬಂದ ಶಿವಮೊಗ್ಗ ಜಿಲ್ಲೆಯ ಹೊಸನಗರದ ಮಹಾಬಲ ದೇವಾಡಿಗ(60) ಎಂಬವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಉಡುಪಿ ಬೃಂದಾವನ ಲಾಡ್ಜ್‌ನ ಮೆನೇಜರ್ ಸೈಯದ್ ಇಮ್ರಾನ್(41) ಎಂಬವರು ಫೆ.23ರಂದು ಬೆಳಗ್ಗೆ ಲಾಡ್ಜ್‌ನಿಂದ ಕೆಲಸದ ನಿಮಿತ್ತ ಹೊರಗೆ ಹೋದವರು ಈವರೆಗೂ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News