ದಿನಸಿ ಅಂಗಡಿಗೆ ನುಗ್ಗಿ ಕಳವು
Update: 2024-02-24 20:44 IST
ಕುಂದಾಪುರ, ಫೆ.24: ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಘಟನೆ ಫೆ.23ರಂದು ರಾತ್ರಿ ವೇಳೆ ಕುಂದಾಪುರ ಖಾರ್ವಿಕೇರಿ ರಸ್ತೆಯಲ್ಲಿ ನಡೆದಿದೆ.
ಸುಭಾಸ್ ಎಂಬವರ ಶ್ರೀಮಹಾಕಾಳಿ ಜನರಲ್ ಸ್ಟೋರ್ ದಿನಸಿ ಅಂಗಡಿಯ ಶಟರ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕ್ಯಾಶ್ ಡ್ರಾಯರ್‌ನಲ್ಲಿದ್ದ 1,00,000ರೂ. ನಗದು ಹಾಗೂ 20,000 ಮೌಲ್ಯದ 4 ಗ್ರಾಂ ಚಿನ್ನದ ಸರ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.