×
Ad

ಡಿಜಿಟಲ್ ಕ್ರಾಂತಿಯಿಂದ ಪೊಲೀಸರಿಗೆ ಸವಾಲುಗಳು ಹೆಚ್ಚಳ: ಸಿಐಡಿ ಡಿಜಿಪಿ ಡಾ.ಸಲೀಂ

Update: 2024-02-25 17:56 IST

ಉಡುಪಿ, ಫೆ.25: ಮೊಬೈಲ್, ಸಾಮಾಜಿಕ ಜಾಲತಾಣ ಸೇರಿದಂತೆ ತಂತ್ರ ಜ್ಞಾನ ಇಲ್ಲದ ಕಾಲದಲ್ಲಿ ಪೊಲೀಸ್ ಕೆಲಸ ತುಂಬಾ ಸುಲಭ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಡಿಜಿಟಲ್ ಕ್ರಾಂತಿಯಿಂದಾಗಿ ಪೊಲೀಸರಿಗೆ ಸಾಕಷ್ಟು ಸವಾಲು ಗಳು ಎದುರಾಗಿವೆ. ಇದರಿಂದ ಪೊಲೀಸ್ ಇಲಾಖೆ ಬಹಳ ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಹೇಳಿದ್ದಾರೆ.

ಉಡುಪಿ ಮಿಷನ್ ಕಂಪೌಂಡ್‌ನ ಯುನೈಟೆಡ್ ಬಾಸೆಲ್ ಮಿಷನ್ ಜುಬ್ಲೀ ಚರ್ಚ್ ಹಾಲ್‌ನಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 1999ರ ಪ್ರಥಮ ತಂಡದ ಸಿಬ್ಬಂದಿಗಳ ರಜತ ಸಂಭ್ರಮ ಸಮಾರಂಭ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಪರಾಧ, ಸಮಸ್ಯೆಗಳು ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಅದನ್ನು ಸಮರ್ಥವಾಗಿ ನಿಬಾಯಿಸುವಂತಹ ಪ್ರತಿಭಾ ನ್ವಿತ, ಕೌಶಲ್ಯಯುತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪೊಲೀಸ್ ಇಲಾಖೆಗೆ ನೇಮಕ ಆಗುತ್ತಿ ರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದರು.

ಪೊಲೀಸ್ ವ್ಯವಸ್ಥೆಯಲ್ಲಿ ಇಂದು ವಿಶೇಷ ಬದಲಾವಣೆಗಳಾಗಿದ್ದು ಅದಕ್ಕೆ ತಕ್ಕಂತೆ ನಮ್ಮ ಕಾರ್ಯವೈಖರಿ ಕೂಡ ಬದಲಾ ಗಿದೆ. ಉಡುಪಿ ಜಿಲ್ಲೆಯಲ್ಲಿ ಇಂದು ಜಿಲ್ಲಾ ಪೊಲೀಸ್ ಜೊತೆಯಲ್ಲಿ ಕರಾವಳಿ ಕಾವಲು ಪಡೆ ಹಾಗೂ ನಕ್ಸಲ್ ನಿಗ್ರಹ ದಳ ಕಾರ್ಯಾಚರಿಸುತ್ತಿದೆ. ಇದರಿಂದಾಗ ಸಾರ್ವಜನಿಕರೊಂದಿಗೆ ಪೊಲೀಸರು ಹೆಚ್ಚು ನಿಕಟವಾದ ಸಂಪರ್ಕ ಹೊಂದಲು ಸಾಧ್ಯ ವಾಗಿದೆ. ಸಂಘಟಿತವಾದ ಪೊಲೀಸ್ ವ್ಯವಸ್ಥೆಗೆ ಪೂರಕ ಜಿಲ್ಲೆಯಾಗಿದ್ದು ಅದನ್ನು ಮುಂದುವರೆಸಿಕೊಂಡು ಹೋಗಬೇಕಾದ ಅಗತ್ಯತೆ ಇದೆ ಎಂದರು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ, ಪ್ರೊಬೆಷನರಿ ಪೊಲೀಸ್ ಅಧೀಕ್ಷಕಿ ಡಾ.ಹರ್ಷ ಪ್ರಿಯಂವದ, ಮಣಿಪಾಲ ಮಾಹೆಯ ನಿವೃತ್ತ ಎಸ್ಟೇಟ್ ಮೆನೇಜರ್ ಜೈವಿಠಲ್, ಆರ್ಕಿಟೇಕ್ಟ್ ಸೈಮನ್ ಉಪಸ್ಥಿತರಿದ್ದರು.

1999ರ ಬ್ಯಾಚ್‌ಗೆ ತರಬೇತಿ ನೀಡಿದ ಗುರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. 1999ರ ಬ್ಯಾಚ್‌ನ ಎಲ್ಲಾ ಸಿಬಂದಿಗಳಿಗೆ ರಜತ ಸಂಭ್ರಮದ ಪ್ರಯುಕ್ತ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ನಿಧನರಾದ ತಂಡದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಡಿಎಆರ್ ಎಎಚ್‌ಸಿ ವಿರೇಂದ್ರ ಶೆಟ್ಟಿ ಸ್ವಾಗತಿಸಿದರು. ಎಎಚ್‌ಸಿ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾಕರ ಎರ್ಮಾಳ್ ವಂದಿಸಿದರು. ಬಳಿಕ ರವೀಂದ್ರ ಪ್ರಭು ತಂಡದಿಂದ ಸಂಗೀತ ರಸಮಂಜರಿ, ಭಾರ್ಗವಿ ತಂಡ ಉಡುಪಿ ಹಾಗೂ ಅಶೋಕ್ ಪೊಳಲಿ ಇವರಿಂದ ನೃತ್ಯ ಪ್ರದರ್ಶನ, ಶ್ರೀದೇವಿ ಕಿರಣ್ ಮಂಗಳೂರು ಇವರಿಂದ ಚಿತ್ರಕಲಾ ಪ್ರದರ್ಶನ, 99ರ ಬ್ಯಾಚ್ ಸಿಬಂದಿ ಕೃಷ್ಣಯ್ಯ ದೇವಾಡಿಗ ಅವರಿಂದ ಯಕ್ಷ ನೃತ್ಯ ವೈಭವ ಕಾರ್ಯಕ್ರಮ ಜರಗಿತು.

‘ಉಡುಪಿ ಜಿಲ್ಲೆಯು ಆರಂಭದಿಂದ ಈವರೆಗೆ ಶಾಂತಿ ಸುವ್ಯವಸ್ಥೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ. ಇದಕ್ಕೆ ಪೊಲೀಸ್ ಅಧಿಕಾರಿಗಳ ಪ್ರಾಮಾಣಿಕ ಸೇವೆ ಕಾರಣ. ಇದರಿಂದ ಈ ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಿದೆ. ಅಲ್ಲದೆ ಎಲ್ಲ ಜಿಲ್ಲೆಗಳು ಗುರುತಿಸುವಂತಹ ಮಟ್ಟಕ್ಕೆ ಉಡುಪಿ ಜಿಲ್ಲೆ ಬೆಳೆದು ನಿಂತಿದೆ’

-ಡಾ.ಎಂ.ಎ.ಸಲೀಂ, ಡಿಜಿಪಿ, ಸಿಐಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News