ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ: ಬಹುಮಾನ ವಿತರಣೆ
ಉಡುಪಿ, ಫೆ.25: ಯಕ್ಷಧ್ರುವ ಪಟ್ಲ ಫೌಂಡೇಶನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ಯೋಜನೆಯಡಿ ಇತ್ತೀಚೆಗೆ ಮೂಡಬಿದಿರೆಯಲ್ಲಿ ಹಮ್ಮಿಕೊಳ್ಳಲಾದ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನದಲ್ಲಿ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಸ್ಪರ್ಧಿಸಿ ಬಹುಮಾನ ಪಡೆದುಕೊಂಡಿದ್ದಾರೆ.
ಇಲ್ಲಿ ಏರ್ಪಡಿಸಿದ್ದ ಯಕ್ಷಗಾನ ಮುಖವರ್ಣಿಕೆ ಸ್ಪರ್ಧೆಯಲ್ಲಿ ಬ್ರಹ್ಮಾವರ ಲಿಟ್ಲ್ ರಾಕ್ ಶಿಕ್ಷಣ ಸಂಸ್ಥೆಯ 9ನೇ ತರಗತಿಯ ಮಾನ್ಯಾ ಜಿ.ಭಂಡಾರಿ ಪ್ರಥಮ ಸ್ಥಾನ, ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ 7ನೇ ತರಗತಿಯ ಶ್ರಾವ್ಯಾ ಯು. ದ್ವಿತೀಯ ಸ್ಥಾನ, ಯಕ್ಷ ಜ್ಞಾನ ಪರೀಕ್ಷಾ ಸ್ಪರ್ಧೆಯಲ್ಲಿ ವಳಕಾಡು ಸರಕಾರಿ ಪ್ರೌಢಶಾಲೆಯ 8ನೇ ತರಗತಿಯ ಮೇಧಾ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಇವರಿಗೆ ಸ್ಮರಣಿಕೆ, ಪ್ರಶಂಸಾಪತ್ರ, ನಗದು ಪುರಸ್ಕಾರಗಳನ್ನು ಯಕ್ಷಧ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ ಹಾಗೂ ಸಂಯೋಜಕ ದಿವಿತ್ ಎಸ್.ಕೋಟ್ಯಾನ್ ಶನಿವಾರ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ಪ್ರದಾನ ಮಾಡಿದರು.