ರಂಗ ಕಲೆಗಳ ಅಧ್ಯಯನದಿಂದ ಮಾನಸಿಕ ಸದೃಡ: ಸುಬ್ರಹ್ಮಣ್ಯ ಪ್ರಸಾದ್
ಹೆಬ್ರಿ: ಮಕ್ಕಳ ಪ್ರತಿಭೆಗಳು ಅನಾವರಣಗೊಳ್ಳಲು ಪಠ್ಯೇತರ ಚಟುವಟಿಕೆಯಲ್ಲಿ ತಮ್ಮ ಮಕ್ಕಳನ್ನು ತೊಡಗಿಸಿಕೊಳ್ಳಬೇಕು. ಭಾರತೀಯ ರಂಗ ಕಲೆಗಳನ್ನು ಅಧ್ಯಯನ ಮಾಡಿದರೆ ಮಾನಸಿಕವಾಗಿ ಸದೃಡರಾಗಲು ಸಾಧ್ಯ ಎಂದು ಯಕ್ಷಗಾನ ಗುರು ಸುಬ್ರಹ್ಮಣ್ಯ ಪ್ರಸಾದ್ ಹೇಳಿದ್ದಾರೆ.
ಹೆಬ್ರಿ ಚಾಣಕ್ಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆರಂಭಗೊಂಡ ಯಕ್ಷಗಾನ ತರಗತಿಯನ್ನು ಭಾಗವತಿಗೆಯ ಮೂಲಕ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಸಮಾರಂಭವನ್ನು ಉದ್ಯಮಿ ಚಾರ ವಾದಿರಾಜ್ ಶೆಟ್ಟಿ ಉದ್ಘಾಟಿಸಿದರು. ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ಯಕ್ಷಗಾನ ಸಂಘಟಕ ದಯಾನಂದ ಶೆಟ್ಟಿ ಮಾತನಾಡಿದರು. ಅಧ್ಯಕ್ಷತೆಯನ್ನು ಚಾಣಕ್ಯ ಏಜ್ಯುಕೇಶನ್ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ವಹಿಸಿದ್ದರು.
ಚಾಣಕ್ಯ ಮೇಲೋಡಿಸ್‌ನ ಗಾಯಕ ನಿತ್ಯಾನಂದ ಭಟ್ ಪ್ರಾರ್ಥಿಸಿದರು. ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ.ಯು ಶೆಟ್ಟಿ ವಂದಿಸಿದರು.