ಉಡುಪಿ: ತರಕಾರಿ ಅಂಗಡಿಗೆ ದುಷ್ಕರ್ಮಿಗಳಿಂದ ಬೆಂಕಿ
Update: 2024-02-25 20:28 IST
ಉಡುಪಿ : ತರಕಾರಿ ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಫೆ.24ರಂದು ರಾತ್ರಿ ವೇಳೆ ನಗರದ ವೀರಾಂಜನೇಯ ದೇವಸ್ಥಾನದ ಬಳಿ ನಡೆದಿದೆ.
ಬ್ರಹ್ಮಾವರದ ಸುಶಾಂತ್ ಎಂಬವರ ಹೋಲ್ ಸೇಲ್ ತರಕಾರಿ ಅಂಗಡಿ ಯನ್ನು ಕೆವಿನ್ ಎಂಬಾತನು ನೋಡಿಕೊಳ್ಳುತ್ತಿದ್ದು, ರಾತ್ರಿ ಕೆಲಸವನ್ನು ಮುಗಿಸಿ ಮನೆಗೆ ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಅಂಗಡಿಗೆ ಬೆಂಕಿ ಹಚ್ಚಿದ್ದು ಅಂಗಡಿ ಸಂಪೂರ್ಣ ಸುಟ್ಟು ಹೋಗಿ ಸುಮಾರು 50,000ರೂ. ನಷ್ಟವಾಗಿರುವು ದಾಗಿ ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.