ಬ್ಯಾಂಕ್ ಓಟಿಪಿ ಪಡೆದು ಆನ್‌ಲೈನ್ ವಂಚನೆ: ಪ್ರಕರಣ ದಾಖಲು
Update: 2024-02-27 20:39 IST
ಉಡುಪಿ: ಬ್ಯಾಂಕ್ ವಿವರ, ಓಟಿಪಿ ಪಡೆದು ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.26ರಂದು ಎಚ್.ಸುರೇಂದ್ರ ಅವರ ತಂದೆಯ ಮೊಬೈಲ್‌ಗೆ ಕೆವೈಸಿ ಅಪ್‌ಡೇಟ್ ಮಾಡುವ ಬಗ್ಗೆ ಸಂದೇಶ ಬಂದಿದ್ದು, ಅದರಂತೆ ಸುರೇಂದ್ರ ಆ ನಂಬರಿಗೆ ನಂಬ್ರಕ್ಕೆ ಕರೆ ಮಾಡಿದರು. ಆಗ ಆತ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಬ್ಯಾಂಕ್ ಖಾತೆಯ ವಿವರ, ಎ.ಟಿ.ಎಂ ವಿವರ ಮತ್ತು ಓಟಿಪಿ ಪಡೆದುಕೊಂಡರು. ಬಳಿಕ ಸುರೇಂದ್ರ ಅವರ ತಂದೆಯ ಬ್ಯಾಂಕ್ ಖಾತೆಯಿಂದ 1,06,000ರೂ. ಹಣವನ್ನು ಆನ್‌ಲೈನ್ ಮುಖೇನ ವರ್ಗಾವಣೆ ಮಾಡಿ, ವಂಚಿಸಿರುವುದಾಗಿ ದೂರಲಾಗಿದೆ.