ಬಾವಿಗೆ ಬಿದ್ದು ಅಂಧ ವೃದ್ಧೆ ಮೃತ್ಯು
Update: 2024-02-27 21:05 IST
ಕುಂದಾಪುರ, ಫೆ.27: ಬಾವಿಗೆ ಬಿದ್ದು ಅಂಧ ವೃದ್ಧೆಯೊಬ್ಬರು ಮೃತಪಟ್ಟ ಘಟನವೆ ಫೆ.27ರಂದು ಬೆಳಗ್ಗೆ ಹೆಮ್ಮಾಡಿ ಗ್ರಾಮದ ಗುಂಡಿಕೊಡ್ಲು ಎಂಬಲ್ಲಿ ನಡೆದಿದೆ.
ಮೃತರನ್ನು ಗುಂಡಿಕೊಡ್ಲು ನಿವಾಸಿ ಕೊರತಿ(84) ಎಂದು ಗುರುತಿಸಲಾಗಿದೆ. ತನ್ನ 14 ವರ್ಷ ಪ್ರಾಯದಲ್ಲೇ ದೃಷ್ಠಿ ಕಳೆದು ಕೊಂಡಿರುವ ಇವರು, ಮನೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.