ಗೋವು ಕಳವು ಪ್ರಕರಣ: ಇಬ್ಬರ ಬಂಧನ
Update: 2024-06-29 21:54 IST
ಶಂಕರನಾರಾಯಣ, ಜೂ.29: ಶಂಕರನಾರಾಯಣ ಪೇಟೆಯಲ್ಲಿ ಜೂ.25 ರಂದು ರಾತ್ರಿ ನಡೆದ ಗೋ ಕಳ್ಳತನಕ್ಕೆ ಸಂಬಂಧಿಸಿದಂತೆ ಶಂಕರನಾರಾಯಣ ಪೋಲಿಸರು ಇಬ್ಬರು ಆರೋಪಿಗಳನ್ನು ಜೂ.29ರಂದು ಬಂಧಿಸಿದ್ದಾರೆ.
ಮಂಗಳೂರು ಆಸೈಗೋಳಿ ನಿವಾಸಿ ನಿಝಾಮುದ್ದೀನ್ ಹಾಗೂ ಅನ್ಸಾರ್ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.