×
Ad

ಕುಂದಾಪುರದ ವ್ಯಕ್ತಿ ಹೈದರಬಾದಿನಲ್ಲಿ ನಾಪತ್ತೆ

Update: 2024-09-29 21:31 IST

ಕುಂದಾಪುರ, ಸೆ.29: ಹೊಟೇಲ್ ಕೆಲಸಕ್ಕೆ ಹೋಗಿದ್ದ ಕುಂದಾಪುರದ ವ್ಯಕ್ತಿಯೊಬ್ಬರು ಹೈದರಬಾದಿನಲ್ಲಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ನಾಪತ್ತೆಯಾದವರನ್ನು ಕುಂದಾಪುರ ವಡೇರಹೋಬಳಿ ಗ್ರಾಮದ ನರಸಿಂಹ (34) ಎಂದು ಗುರುತಿಸಲಾಗಿದೆ. ಇವರು ಆ.14ರಂದು ಹೈದರಬಾದನ ನಕ್ರಿಕೇಲ್ ಎಂಬಲ್ಲಿರುವ ಹೋಟೇಲ್‌ಗೆ ಕೆಲಸಕ್ಕೆ ಹೋಗಿದ್ದು, ಅನಾರೋಗ್ಯದ ಕಾರಣ ಅವರು ಊರಿಗೆ ಹೊರಟಿದ್ದರು. ಹೈದರಬಾದ್ ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ಇವರು ನಾಪತ್ತೆಯಾಗಿದ್ದಾರೆ. ಈವರೆಗೂ ನರಸಿಂಹ ಅವರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News