×
Ad

ಮಣಿಪಾಲ್ ಮ್ಯಾರಥಾನ್‌ಗೆ ನೋಂದಣಿ ಪ್ರಕ್ರಿಯೆ ಆರಂಭ

Update: 2024-10-26 21:25 IST

ಮಣಿಪಾಲ, ಅ.26: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಮುಂದಿನ ಫೆ.9ರಂದು ನಡೆಯಲು ನಿಗದಿಯಾಗಿರುವ ಮಣಿಪಾಲ ಮ್ಯಾರಥಾನ್‌ನ 7ನೇ ಆವೃತ್ತಿಗೆ ಆನ್‌ಲೈನ್‌ನಲ್ಲಿ ಸ್ಪರ್ಧಿಗಳ ನೊಂದಣಿ ಪ್ರಾರಂಭ ಗೊಂಡಿದೆ ಎಂದು ಮಾಹೆ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷ ನಡೆದ ಮ್ಯಾರಥಾನ್‌ನಲ್ಲಿ 15,000ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಆವೃತ್ತಿ 2025ರ ಫೆ.9ರಂದು ನಡೆಯಲು ನಿಗದಿ ಯಾಗಿದ್ದು, ಈ ಬಾರಿ ಸ್ಪರ್ಧಿಸಲು ಉತ್ಸುಕರಾಗಿರುವವರಿಗೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಈ ಬಾರಿ ಇನ್ನೂ ಹೆಚ್ಚು ಮಂದಿ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಈ ಬಾರಿ ಮ್ಯಾರಥಾನ್‌ನ ಥೀಮ್ ‘ಇನ್ನೋವೇಶನ್ ಇನ್ ಮೋಷನ್: ಟೆಕ್ನಾಲಜಿ ಫಾರ್ ಹೆಲ್ತ್ ಅಂಡ್ ಫಿಟ್ನೆಸ್’ (ಚಲನೆಯಲ್ಲಿ ನಾವೀನ್ಯತೆ: ಆರೋಗ್ಯ ಮತ್ತು ದೈಹಿಕ ಕ್ಷಮತೆಗೆ ತಂತ್ರಜ್ಞಾನದ ಬಳಕೆ). ದೇಶದ ಅತಿ ದೊಡ್ಡ ವಿದ್ಯಾರ್ಥಿ-ಸಂಘಟಿತ ಮ್ಯಾರಥಾನ್‌ಗಳಲ್ಲಿ ಒಂದಾಗಿರುವ ಮಣಿಪಾಲ ಮ್ಯಾರಥಾನ್‌ನ ಓಟದ ಮಾರ್ಗಗಳನ್ನು ಮಣಿಪಾಲ ಹಾಗೂ ಉಡುಪಿಗಳಲ್ಲಿ ನಿಗದಿ ಪಡಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.

ಮಣಿಪಾಲ ಕೆಎಂಸಿ ಗ್ರೀನ್ಸ್‌ನಿಂದ ಮುಂಜಾನೆ 5:00ಗಂಟೆಗೆ ಪ್ರಾರಂಭಗೊಳ್ಳುವ ಈ ಮ್ಯಾರಥಾನ್‌ನಲ್ಲಿ ಅಂತರ್‌ ರಾಷ್ಟ್ರೀಯ ಪ್ರಮಾಣೀಕರಣ, ವಿಶ್ವದರ್ಜೆಯ ಅನುಭವ ಸಿಗಲಿದೆ. ಆಸಕ್ತರು ಆನ್‌ಲೈನ್ ನಲ್ಲಿ -manipalmarathon.in- ನೊಂದಣಿ ಮಾಡಿಕೊಳ್ಳ ಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News