×
Ad

ಮಣಿಪಾಲ: ತುಳು ನಾಟಕ ಕಲಾವಿದರ ಕಾರು ಅಪಘಾತ

Update: 2024-10-27 20:38 IST

ಮಣಿಪಾಲ: ಈಶ್ವರ ನಗರದ ನಗರಸಭೆಯ ಪಂಪ್‌ಹೌಸ್ ಬಳಿ ಇಂದು ಸಂಜೆ ವೇಳೆ ನಾಟಕ ಕಲಾವಿದರ ಕಾರೊಂದು ಅಪಘಾತಕ್ಕೀಡಾಗಿದ್ದು, ಯಾವುದೇ ಗಾಯಗಳಾಗದೇ ಎಲ್ಲರೂ ಅಪಾಯದಿಂದ ಪಾರಾಗಿರುವ ಬಗ್ಗೆ ವರದಿಯಾಗಿದೆ.

ಉಡುಪಿಯ ಹೀರೆಬೆಟ್ಟುವಿನಲ್ಲಿ ಇಂದು ಸಂಜೆ ಪ್ರದರ್ಶನಗೊಳ್ಳಲಿದ್ದ ‘ಏರ್ಲಾ ಗ್ಯಾರಂಟಿ ಅತ್ತು’ ನಾಟಕ ಪ್ರದರ್ಶನಕ್ಕಾಗಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ನಾಟಕ ತಂಡದ ಸದಸ್ಯರು ಕಾರಿನಲ್ಲಿ ಸಂಚರಿಸುತ್ತಿದ್ದು, ಇದರಲ್ಲಿ ತುಳು ನಾಟಕದ ಕಲಾವಿದ ಭೋಜರಾಜ ವಾಮಂಜೂರ್ ಕೂಡ ಇದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಬಿದ್ದು ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ. ತಂಡದ ಕಲಾವಿದರೆಲ್ಲರೂ ಯಾವುದೇ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News