×
Ad

ಉಡುಪಿ: ಗ್ರಾಪಂ ಉಪಚುನಾವಣೆಯ ವಿಜೆಯಿ ಅಭ್ಯರ್ಥಿಗಳು

Update: 2024-11-26 21:56 IST

ಉಡುಪಿ, ನ.26: ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ಕಾರಣಗಳಿಂದ ತೆರವುಗೊಂಡ 12 ಸ್ಥಾನಗಳಿಗೆ ನಡೆದ ಉಪಚುನಾವಣೆಯ ಮತಗಳ ಎಣಿಕೆ ಇಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆದಿದ್ದು, ವಿಜೆಯಿ ಅಭ್ಯರ್ಥಿಗಳ ವಿವರ ಹೀಗಿದೆ.

ಕಾರ್ಕಳ ತಾಲೂಕಿನ ಈದುವಿನಿಂದ ಅನುಸೂಚಿತ ಪಂಗಡದ ಮಹಿಳೆ ಜಯಂತಿ, ನಲ್ಲೂರುನಿಂದ ಅನುಸೂಚಿತ ಜಾತಿ ಮಹಿಳೆ ಸವಿತಾ ಶ್ರೀಧರ್, ನಿಟ್ಟೆಯಿಂದ ಸಾಮಾನ್ಯ ಮಹಿಳೆ ಜ್ಯೋತಿ ರೀನಾ ಡಿಸೋಜ, ನೀರೆಯಿಂದ ಅನುಸೂಚಿತ ಪಂಗಡದ ಮಹಿಳೆ ಸೌಮ್ಯ, ನೀರೆ 2ರಿಂದ ಹಿಂದುಳಿದ ವರ್ಗ ಅದ ಮಹೇಶ್, ಸಾಮಾನ್ಯ ಕ್ಷೇತ್ರದಿಂದ ರಾಜೇಂದ್ರ ಶೆಟ್ಟಿ, ಕೆರ್ವಾಶೆಯ ಸಾಮಾನ್ಯ ಕ್ಷೇತ್ರದಿಂದ ಧರ್ಮರಾಜ ಹೆಗ್ಡೆ, ಕಡ್ತಲ ಹಿಂದುಳಿದ ವರ್ಗ ಬಿಯಿಂದ ದೀಕ್ಷಿತ್ ಶೆಟ್ಟಿ.

ಕುಂದಾಪುರ ತಾಲೂಕು ಅಮಾಸೆಬೈಲಿನಿಂದ ಸಾಮಾನ್ಯ ಮಹಿಳೆ ಸುಮತಿ ಎಸ್.ಪೂಜಾರಿ, ಉಡುಪಿ ತಾಲೂಕು ಬೊಮ್ಮರಬೆಟ್ಟುನಿಂದ ಅನುಸೂಚಿತ ಜಾತಿ ಮಹಿಳೆ ಕುಶಲ, ಕೊಡಿಬೆಟ್ಟು ಅಂಜಾರು ಸಾಮಾನ್ಯ ಕ್ಷೇತ್ರದಿಂದ ಅನಿಲ್ ಎಸ್.ಶೆಟ್ಟಿ ಹಾಗೂ ಬ್ರಹ್ಮಾವರ ತಾಲೂಕು ಕೋಟ ಗಿಳಿಯಾರಿನಿಂದ ಸಾಮಾನ್ಯ ಮಹಿಳೆ ಪ್ರೇಮ ದೇವಾಡಿಗ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News