×
Ad

ಅರ್ಚಕರಿಗೆ ಡಿಬಿಟಿ ಮೂಲಕ ತಸ್ತೀಕ್ ಪಾವತಿ: ಅರ್ಜಿ ಆಹ್ವಾನ

Update: 2025-01-08 20:44 IST

ಉಡುಪಿ: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ಅರ್ಚಕರಿಗೆ ಪಾವತಿಸಲಾಗುತ್ತಿರುವ ತಸ್ತೀಕ್ ಮೊತ್ತವನ್ನು ನೇರವಾಗಿ ಡಿಬಿಟಿ ಮೂಲಕ ಪಾವತಿಸಲು ಕ್ರಮಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ ತಸ್ತೀಕ್ ಪಡೆಯುತ್ತಿರುವ ಎಲ್ಲಾ ದೇವಸ್ಥಾನಗಳ ಅರ್ಚಕರು ದೇವಸ್ಥಾನದ ಮುಂದೆ ನಿಂತು ತೆಗೆದ ಸೆಲ್ಫಿ ಫೋಟೋ, ಅರ್ಚಕರ ನೇಮಕಾತಿ ಪತ್ರ ಹಾಗೂ ಆಧಾರ್/ಪಾನ್ ಕಾರ್ಡ್‌ನೊಂದಿಗೆ ಸೇವಾಸಿಂಧು ವೆಬ್ ಪೋರ್ಟಲ್ -https://sevasindhuservices.karnataka.gov.in- ಮೂಲಕ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News