×
Ad

ರಾಷ್ಟ್ರಮಟ್ಟದ ಅಭಾಕಸ್ ಸ್ಪರ್ಧೆ: ತ್ರಿಷಾ ದೇವಾಡಿಗ ಚಾಂಪಿಯನ್

Update: 2025-01-14 18:29 IST

ಕುಂದಾಪುರ: ಐಡಿಯಲ್ ಪ್ಲೇ ಅಭಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನ ವೈಟ್ ಫೆದರ್ ಕನ್ವೆನ್ಷನ್ ಹಾಲ್‌ನಲ್ಲಿ ಇತ್ತೀಚೆಗೆ ನಡೆದ 20ನೇ ರಾಷ್ಟ್ರಮಟ್ಟದ ಅಭಾಕಸ್ ಮತ್ತು ಮೆಂಟಲ್ ಆರ್ಥಮೆಟಿಕ್ ಹಾಗೂ 16ನೇ ವೇದಿಕ್ ಮಾಥ್ಸ್ ಸ್ಪರ್ಧೆಯಲ್ಲಿ ಐಪಿಎ ಕುಂದಾಪುರ ಸೆಂಟರ್‌ನ ತ್ರಿಷಾ ಆರ್.ದೇವಾಡಿಗ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ತ್ರಿಷಾ ಪ್ರಸ್ತುತ ಬ್ರಹ್ಮಾವರ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಐದನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ಇವರಿಗೆ ಐಡಿಯಲ್ ಪ್ಲೇ ಅಭಾಕಸ್ ಕುಂದಾಪುರ ಸೆಂಟರ್ ನ ಮುಖ್ಯಸ್ಥ ಪ್ರಸನ್ನ ಕೆ.ಬಿ. ಹಾಗೂ ಭೋದಕರಾದ ಮಹಾಲಕ್ಷ್ಮೀ ಮತ್ತು ದೀಪ ತರಬೇತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News