×
Ad

ಕಾಪು ಪುರಸಭೆ: ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಕಡ್ಡಾಯ

Update: 2025-01-16 19:24 IST

ಉಡುಪಿ, ಜ.16: ಕಾಪು ಪುರಸಭೆ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಉದ್ಯಮದಾರರು, ನಗರಾಭಿವೃದ್ಧಿ ಇಲಾಖೆಯ ಸುತ್ತೋಲೆಯಂತೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕವಾಗಿ ಪರವಾನಗಿ ಪಡೆಯು ವುದು ಕಡ್ಡಾಯವಾಗಿದ್ದು, ಕೋಟ್ಪಾ ಕಾಯ್ದೆಯಂತೆ ನಿಗದಿತ ಶುಲ್ಕ ಪಾವತಿಸಿ ಕಡ್ಡಾಯವಾಗಿ ಉದ್ಯಮ ಪರವಾನಿಗೆಯನ್ನು ಪಡೆದುಕೊಳ್ಳಬೇಕು.

ಸರಕಾರದ ಸುತ್ತೋಲೆಯಂತೆ ಶಾಲಾ-ಕಾಲೇಜು, ದೇವಸ್ಥಾನ, ಆಸ್ಪತ್ರೆ ಹಾಗೂ ಸಂಸ್ಥೆಗಳಿಂದ 100 ಗಜ ಅಂತರದಲ್ಲಿ ಯಾರು ಕೂಡ ತಂಬಾಕು ಉತ್ಪನ್ನಗಳ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡುತ್ತಿದ್ದಲ್ಲಿ ಪ್ರಕಟಣೆ ತಲುಪಿದ ತಕ್ಷಣವೇ ಅಲ್ಲಿನ ಉದ್ಯಮವನ್ನು ಸ್ಥಗಿತಗೊಳಿಸಿ ಬೇರೆ ಕಡೆ ಸ್ಥಳಾಂತರಿಸಬೇಕು.

ಕೋಟ್ಪಾ ಕಾಯ್ದೆಯ ಸೆಕ್ಷನ್ 2,3,4ರಲ್ಲಿ ಸೂಚಿಸಿರುವಂತೆ ಕಾಪು ಪುರಸಭಾ ವ್ಯಾಪ್ತಿಯ ಎಲ್ಲಾ ಹೋಟೇಲ್, ಬೇಕರಿ, ದಿನಸಿ ಅಂಗಡಿ, ಖಾದ್ಯ ಪದಾರ್ಥ ಮಾರಾಟ ಅಂಗಡಿಗಳಿಗೆ ಹಾಗೂ ಇತರ ಉದ್ಯಮದಾರರು ಕೋಟ್ಪಾ ಕಾಯ್ದೆಯ ಸೆಕ್ಷನ್ 5ರಲ್ಲಿ ಸೂಚಿಸಿರುವಂತೆ ಧೂಮಪಾನ ಮತ್ತು ತಂಬಾಕು ಸೇವನೆ ಬಗ್ಗೆ ಸೂಚನಾ ಫಲಕವನ್ನು ಕಡ್ಡಾಯವಾಗಿ ಉದ್ಯಮದ ಸ್ಥಳದಲ್ಲಿ ಪ್ರದರ್ಶಿಸಬೇಕು.

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಹಾಗೂ ತಂಬಾಕಿನ ಇತರೇ ಉತ್ಪನ್ನಗಳ ಸೇವನೆ ಮತ್ತು ಯಾವುದೇ ರೀತಿಯ ಮಾದಕ ಪಾನೀಯ ಅಥವಾ ಮಾದಕ ವಸ್ತುಗಳ ಸೇವನೆಯನ್ನು ‘ದ ಸಿಗರೇಟ್ಸ್ ಅಂಡ್ ಅದರ್ ಟೊಬ್ಯಾಕೋ ಪ್ರೋಡಕ್ಟ್ಸ್ (ಪ್ರೋಹಿಬಿಷನ್ ಆಫ್ ಅಡ್ವರ್ಟೈಸ್‌ಮೆಂಟ್ ಅಂಡ್ ರೆಗ್ಯುಲೇಷನ್ ಆಫ್ ಟ್ರೇಡ್ ಅಂಡ್ ಕಾಮರ್ಸ್, ಪ್ರೊಡಕ್ಷನ್, ಸಪ್ಲೈ ಅಂಡ್ ಡಿಸ್ಟ್ರೀಬ್ಯುಷನ್) ಆಕ್ಟ್ 2003 (ಕೇಂದ್ರ ಅಧಿನಿಯಮ 34/2003)ರಲ್ಲಿ ಮತ್ತು ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮ ಗಳು, 2021ರ ನಿಯಮ-31 ರಂತೆ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು. ಈ ಬಗ್ಗೆ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ನಿಗದಿತ ದಂಡ ಶುಲ್ಕ ವಿಧಿಸಿ ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

ತಂಬಾಕು ಮಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು - Stop tabbacco Aap-ನಲ್ಲಿ ಪೋಟೋ ಮತ್ತು ವಿಳಾಸ ಸಹಿತ ದೂರನ್ನು ದಾಖಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪುರಸಭೆಯ ಆರೋಗ್ಯ ವಿಭಾಗ ವನ್ನು ಸಂಪರ್ಕಿಸಬಹುದು ಎಂದು ಕಾಪು ಪುರಸಭೆ ಮುಖ್ಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News