×
Ad

ರಾಷ್ಟ್ರಮಟ್ಟದ ಟೆನ್ನಿಸ್ ವಾಲಿಬಾಲ್: ವಿಜೇತ ತಂಡಕ್ಕೆ ಸನ್ಮಾನ

Update: 2025-01-20 18:56 IST

ಉಡುಪಿ, ಜ.20: ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಉತ್ತರ ಪ್ರದೇಶದ ಗಾಜಿಯಬಾದ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಟೆನ್ನಿಸ್ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಉಡುಪಿ ಜಿಲ್ಲೆಯ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿಗಳಾದ ತಂಡದ ನಾಯಕಿ ಸಾನಿಧ್ಯ ಬೇಕಲ್, ಕುಷಿ, ಕನಿಸ್ಕ, ಸಮೀಕ್ಷಾ ಪ್ರಥಮ ಸ್ಥಾನ ಪಡೆದಿದ್ದಾರೆ.

ಉಡುಪಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ತಂಡವನ್ನು ಕಾಲೇಜು ಆಡಳಿತ ಮಂಡಳಿ ಹಾಗೂ ಪೋಷಕರು ಸ್ವಾಗತಿಸಿದರು. ಬಳಿಕ ಅವರನ್ನು ಕಲ್ಯಾಣಪುರ ಸಂತೆಕಟ್ಟೆಯಿಂದ ಕಾಲೇಜಿನವರೆಗೆ ಭವ್ಯ ಮೆರಣಿಗೆಯಲ್ಲಿ ಕರೆ ತರಲಾಯಿತು. ಈ ಸಂದರ್ಭ ದಲ್ಲಿ ತಂಡದ ತರಬೇತುದಾರ ಸುಮನ್ ಹಾಗು ಕ್ರೀಡಾಳು ಗಳನ್ನು ಗೌವಿಸಲಾಯಿತು.

ಪ್ರಾಂಶುಪಾಲೆ ಸವಿತಾ ಕುಮಾರಿ, ಫಾ.ಫರ್ಡಿನಾಂಡ್ ಗಾನ್ಸೋ, ದೈಹಿಕ ಶಿಕ್ಷಕ ಸ್ಟೀವನ್ ಪಿಂಟೋ, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಪೋಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News