ಮಣಿಪಾಲ: ಸಂಚಾರ ಜಾಗೃತಿ ಸಪ್ತಾಹ ಚಾಲನೆ
ಮಣಿಪಾಲ: ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ, ಮಣಿಪಾಲ ಸಿವಿಲ್ ಇಂಜಿನಿಯರಿಂಗ್ ವಿಭಾಗ ನುಡಿ ಘಟಕದ ಸಹಯೋಗದೊಂದಿಗೆ ಸಂಚಾರ ಜಾಗೃತಿ ಸಪ್ತಾಹವನ್ನು ಮಣಿಪಾಲದಲ್ಲಿ ಜ.18ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಮನೋಹರ್ ಎಚ್.ಕೆ. ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಮತ್ತು ಸಮುದಾಯಕ್ಕೆ ಟ್ರಾಫಿಕ್ ಸಿಗ್ನಲ್ ಜಾಗೃತಿ, ಮದ್ಯಪಾನ ಮತ್ತು ಚಾಲನೆಯ ಅಪಾಯಗಳು, ಜವಾಬ್ದಾರಿಯುತ ಪಾರ್ಕಿಂಗ್ ಅಭ್ಯಾಸಗಳು, ಸಂಚಾರ ಅಡಚಣೆಗಳನ್ನು ಕಡಿಮೆಗೊಳಿಸುವುದು, ಟ್ರಾಫಿಕ್ ಸಿಗ್ನಲ್ ಜಾಗೃತಿ ಶಿಕ್ಷಣವನ್ನು ಈ ಕಾರ್ಯಕ್ರಮದ ಮೂಲಕ ನೀಡಲಾಯಿತು.
ಎನ್‌ಎಸ್‌ಎಸ್ ತಂಡದ ನಾಯಕ ವಿಜಯಾಂಶ್ ಚೌರಾಸಿಯಾ ವಂದಿಸಿದರು. ಘಟಕದ ಮುಖ್ಯಸ್ಥರಾದ ಅಕ್ಷತ ಕುರಾನಾ, ಸಂಜನಾ ಮತ್ತು ಕಣವ್ ಸಚ್ದೇವ, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ಬಾಲಕೃಷ್ಣ ಮದ್ದೋಡಿ, ಡಾ.ಲಕ್ಷ್ಮಣರಾವ್, ಡಾ.ಪೂರ್ಣಿಮಾ ಭಾಗವತ, ಡಾ.ಹರ್ಷಿಣಿ ದಾಸರಿ, ಡಾ.ಮಹಾಶ್ವೇತಾ ಮೇಗಾರ್ ಉಪಸ್ಥಿತರಿದ್ದರು.