ಉಡುಪಿ ಜಿಲ್ಲಾ ಮಟ್ಟದಲ್ಲಿ ಹೆಜ್ಜೆ ಸಂಭ್ರಮ: ತಲ್ಲೂರು ಶಾಲೆ ಪ್ರಥಮ
ಉಡುಪಿ, ಜ.22: ಫಸ್ಟ್ ಸ್ಟೆಪ್ ಸಂಸ್ಥೆ ಉಡುಪಿ ವತಿಯಿಂದ ವಿಶೇಷ ಮಕ್ಕಳ ಪ್ರತಿಭೆಗಳ ಅನಾವರಣಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಹೆಜ್ಜೆ ಸಂಭ್ರಮ ಎಂಬ ಕಾರ್ಯಕ್ರಮವನ್ನು ಜ.18ರಂದು ಉಡುಪಿಯ ಅಜ್ಜರಕಾಡಿನ ಪುರಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಮಾನಂದ ಗುರೂಜಿ ಮಾತನಾಡಿ, ವಿಶೇಷ ಮಕ್ಕಳಿಗಾಗಿಯೇ ಹಮ್ಮಿಕೊಂಡ ಈ ಕಾರ್ಯಕ್ರಮ ವಿಶಿಷ್ಟ ಹಾಗು ವಿಭಿನ್ನ ರೀತಿಯಾಗಿದೆ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆದು, ಮಕ್ಕಳಿಗೆ ಅವಕಾಶಗಳು ಒದಗಿಸಬೇಕು ಎಂದು ಹಾರೈಸಿದರು.
ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಕಮಲಾಕ್ಷ ಕಾಮತ್, ಪೂರ್ಣಿಮಾ, ಸಂಧ್ಯಾ ರಮೇಶ್, ವಿಶ್ವನಾಥ್ ಶೆಣೈ ಮುಖ್ಯ ಅತಿಥಿಯಾಗಿದ್ದರು. ಫಸ್ಟ್ ಸ್ಟೆಪ್ ಸಂಸ್ಥಾಪಕಿ ಅಕ್ಷತಾ ರಾವ್ ಉಪಸ್ಥಿತರಿದ್ದರು.
ಹೆಜ್ಜೆ ಸಂಭ್ರಮ ಕಾರ್ಯಕ್ರಮದಲ್ಲಿ ವಿಶೇಷ ಮಕ್ಕಳಿಗಾಗಿಯೇ ಬದುಕು ಬದಲಾಯಿಸುವ ಯಶೋಗಾಥೆ ಎನ್ನುವ ನೃತ್ಯ ರೂಪಕವನ್ನು ಏರ್ಪಡಿಸ ಲಾಗಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 15 ವಿಶೇಷ ಶಾಲೆಯ ಮಕ್ಕಳು ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ನಾರಾಯಣ ವಿಶೇಷ ಶಾಲೆ ತಲ್ಲೂರು ಪ್ರಥಮ ಹಾಗು ಕಾರ್ಕಳದ ಚೇತನ ದ್ವಿತೀಯ, ಮಲ್ಪೆಯ ಕಾರುಣ್ಯ ತೃತೀಯ ಬಹುಮಾನವನ್ನು ಗೆದ್ದುಕೊಂಡಿತು. ಭಾಗವಹಿಸಿದ ಎಲ್ಲಾ ವಿಶೇಷ ಶಾಲಾ ಮಕ್ಕಳಿಗೆ ಬಹು ಮಾನವನ್ನು ನೀಡಿ ಗೌರವಿಸಲಾಯಿತು. ಅಲ್ಲದೆ 15 ಶಾಲೆಯಿಂದ ವಿಶೇಷ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.