ಕರ್ನಾಟಕ ಕ್ರೀಡಾಕೂಟ: ಪುರುಷರ ಹಾಕಿಯಲ್ಲಿ ಹಾಸನ, ಹಾವೇರಿ ಫೈನಲಿಗೆ
ಉಡುಪಿ: ಕರ್ನಾಟಕ ಕ್ರೀಡಾಕೂಟದ ಪುರುಷರ ಹಾಕಿಯಲ್ಲಿ ಹಾವೇರಿ ಹಾಗೂ ಹಾಸನ ಜಿಲ್ಲಾ ತಂಡಗಳು ನಾಳೆ ಬೆಳಗ್ಗೆ 10:30ಕ್ಕೆ ಮಣಿಪಾಲ ಎಂಡ್‌ಪಾಯಿಂಟ್‌ನ ಹಾಕಿ ಸ್ಟೇಡಿಯಂನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕಕ್ಕಾಗಿ ಸೆಣಸಾಟ ನಡೆಸಲಿವೆ.
ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹಾಸನ ತಂಡ, ಬೆಂಗಳೂರು ನಗರ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ 6-5ರಿಂದ ರೋಚಕ ವಾಗಿ ಹಿಮ್ಮೆಟ್ಟಿಸಿದರೆ, ಮತ್ತೊಂದು ಸೆಮಿಫೈನಲ್‌ನಲ್ಲಿ ಹಾವೇರಿ ತಂಡವು ಬಳ್ಳಾರಿ ಜಿಲ್ಲಾ ತಂಡದ ವಿರುದ್ಧ 2-0 ಅಂತರದ ಜಯ ದಾಖಲಿಸಿತು.
ನಿನ್ನೆ ನಡೆದ ಅಂತಿಮ ಲೀಗ್ ಪಂದ್ಯಗಳಲ್ಲಿ ಹಾಸನ ತಂಡ, ದಕ್ಷಿಣ ಕನ್ನಡ ತಂಡವನ್ನು 10-1 ಗೋಲುಗಳ ಅಂತರದಿಂದ ಸೋಲಿಸಿದರೆ, ಧಾರವಾಡ ಹಾಗೂ ಹಾವೇರಿ ನಡುವಿನ ಪಂದ್ಯ 1-1ಗೋಲುಗಳಿಂದ ಡ್ರಾನಲ್ಲಿ ಮುಕ್ತಾಯಗೊಂಡಿತು. ಲೀಗ್ ಪಂದ್ಯಗಳ ಕೊನೆಗೆ ಗುಂಪಿನಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದ ಹಾಸನ, ಬಳ್ಳಾರಿ, ಬೆಂಗಳೂರು ನಗರ ಹಾಗೂ ಹಾವೇರಿ ತಂಡಗಳು ಸೆಮಿಫೈನಲ್‌ಗೆ ತೇರ್ಗಡೆಗೊಂಡಿದ್ದವು.
ಜುಡೋ ಪುರುಷ, ಮಹಿಳೆಯರ ವಿಭಾಗದ ಫಲಿತಾಂಶ
ಅಜ್ಜರಕಾಡಿನ ಟೆನಿಸ್ ಅಂಕಣದಲ್ಲಿ ಎರಡು ದಿನಗಳ ಕಾಲ ನಡೆದ ಪುರುಷರು ಹಾಗೂ ಮಹಿಳೆಯರ ವಿಭಾಗದ ಜುಡೋ ಸ್ಪರ್ಧೆಯ ಅಂತಿಮ ಫಲಿತಾಂಶ ಹೀಗಿದೆ.
ಪುರುಷರು: 60ಕೆ.ಜಿ.:1.ವಿಷ್ಣು ಗೋರವ ಬೆಳಗಾವಿ, 2.ಸಚಿನ್ ಪವಾರ್ ವಿಜಯಪುರ, 3.ಕಿರಣ್‌ಕುಮಾರ್ ಎಸ್. ವಿಜಯನಗರ. 66ಕೆ.ಜಿ.:1 ಧರಪ್ಪ ಎಂ.ಟಿ. ಬೆಂಗಳೂರು, 2.ಭರ್ಮಪ್ಪ ಬಾಗಲಕೋಟೆ, 3.ಆಸೀಫ್ ಜಿ. ಧಾರವಾಡ. 73ಕೆ.ಜಿ.: 1.ಮಂಜುನಾಥ ದಾವಣಗೆರೆ, 2.ಮಹೇಶ್ ಧಾರವಾಡ, 3.ರಾಜೇಶ್ ಸರ್ಕಿ ಬೆಂಗಳೂರು.
81ಕೆ.ಜಿ.: 1.ಯಾಕೂಬ್ ಖಾನ್ ಬೆಂಗಳೂರು, 2.ಸತ್ವಾಡಿ ಹರೀಶ್ ವಿಜಯನಗರ, 3.ಎನ್.ಕೆ.ಲವೇಶ್ ಗೌಡ ಬಾಗಲಕೋಟೆ. 90ಕೆ.ಜಿ.: 1. ರೋಹನ್ ಬಿ.ಎಸ್. ಬೆಳಗಾವಿ, 2.ಬಸ್ಯಾ ಹಿರೇಮಠ ಧಾರವಾಡ, 3.ಸತೀಶ್ ದಾವಣಗೆರೆ.
100ಕೆಜಿ: 1.ರವಿಚಂದ್ರ ಎಸ್. ಬೆಂಗಳೂರು, 2.ಲೋಹಿತ್‌ರಾಜ್ ಧಾರವಾಡ, 3.ಮಂಜ ನಾಯ್ಕ್ ವಿಜಯನಗರ. 100+ಕೆ.ಜಿ.:1. ಅವಿನಾಶ್ ಎಚ್.ವಿ. ಬೆಂಗಳೂರು, 2.ರಾಹುಲ್ ಎಲ್., ಬೆಳಗಾವಿ, 3.ಧೀರಜ್ ಕುಮಾರ್ ಟಿ.ಕೆ. ಮಂಗಳೂರು.
ಮಹಿಳೆಯರ ವಿಭಾಗ:
48ಕೆ.ಜಿ.: 1.ಐಶ್ವರ್ಯ ಬಿ. ಬೆಂಗಳೂರು, 2. ರಮ್ಯಾ ಜಿರಾಲಿ ಬೆಳಗಾವಿ, 3.ಸುಚಿತ್ರ ದಾವಣಗೆರೆ. 52ಕೆಜಿ.: 1.ಸರಿತಾ ಬೆಳಗಾವಿ, 2.ರೇಖಾ ಬಾಯಿ ಎಲ್. ವಿಜಯನಗರ, 3.ಸುಜಾತ ಕೆ.ಜಿ. ದಾವಣಗೆರೆ. 57ಕೆ.ಜಿ.: 1.ಸಹನಾ ಎಸ್.ಆರ್. ಬೆಳಗಾವಿ, 2.ರಕ್ಷಿತಾ ಬೆಂಗಳೂರು, 3.ತೇಜಾ ಜೆ. ಮಂಗಳೂರು.
63ಕೆ.ಜಿ.:1.ಹರ್ಷಿತಾಎಸ್. ಬೆಂಗಳೂರು, 2.ಸ್ಪೂರ್ತಿ ಜೆ. ಮಂಡ್ಯ, 3.ಜಿ.ಕೆ.ಅಕ್ಷತಾ ದಾವಣಗೆರೆ. 70ಕೆ.ಜಿ.: 1.ರಾಧಿಕಾ ಸುನಿಲ್ ಬೆಳಗಾವಿ, 2.ತನುಶ್ರೀ ಕಾಲೆ ದಾವಣಗೆರೆ, 3.ಪ್ರಿಯಾಂಕ ಎಸ್.ಬೆಂಗಳೂರು. 78ಕೆ.ಜಿ.: 1.ಪಾರ್ವತಿ ಚಿನ್ನಪ್ಪ ಬೆಳಗಾವಿ, 2.ವಂದನಾ ಎಂ.ಕೆ. ಮಂಡ್ಯ, 3.ರಿಬೇಕಾ ವಿಜಯನಗರ. 78+ಕೆ.ಜಿ.:1.ತ್ರಿವೇಣಿ ಕೆ. ಬೆಳಗಾವಿ, 2.ವೈಷ್ಣವಿ ವಿಜಯನಗರ.