×
Ad

ಕೋಟೇಶ್ವರ ಮೇಪು ಕೊರಗರ ಕಾಲೋನಿಗೆ ಸಂಸದ ಕೋಟ ಭೇಟಿ

Update: 2025-01-23 21:21 IST

ಕುಂದಾಪುರ, ಜ.23: ತಾಲೂಕಿನ ಕೋಟೇಶ್ವರ ಗ್ರಾಪಂ ವ್ಯಾಪ್ತಿಯ ಮೇಪು ಕೊರಗರ ಕಾಲೋನಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿ ಕಾಲೋನಿಯ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಮೇಪು ಕೊರಗ ಕಾಲೋನಿಯಲ್ಲಿ 9 ಕೊರಗ ಕುಟುಂಬಗಳು ವಾಸವಾಗಿದ್ದು, ಇಲ್ಲಿನ ನಿವಾಸಿಗರು ವಾಸ್ತವ್ಯದ ಮನೆ, ಕುಡಿಯುವ ನೀರು, ನಿವೇಶನಗಳ ಬಗ್ಗೆ ಸಂಸದರಿಗೆ ಮಾಹಿತಿ ನೀಡಿ, ಒಂದೇ ಕುಟುಂಬದಿಂದ ವಿಭಜನೆಗೊಂಡವರಿಗೆ ಹೆಚ್ಚುವರಿ ಭೂಮಿಯ ಅಗತ್ಯದ ಬಗ್ಗೆ ತಿಳಿಸಿದರು.

ಕುಡಿಯುವ ನೀರಿಗಾಗಿ ಕಾಲೋನಿಗೆ ವಿಶೇಷ ಕುಡಿಯುವ ನೀರಿನ ಘಟಕ ಒದಗಿಸುವಂತೆ ಈ ಸಂದರ್ಭದಲ್ಲಿ ಅವರು ಕೋರಿಕೆ ಸಲ್ಲಿಸಿದರು.

ಭೇಟಿಯ ಸಂದರ್ಭದಲ್ಲಿ ಸಂಸದರೊಂದಿಗೆ ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ರಾಗಿಣಿ ದೇವಾಡಿಗ, ಉಪಾಧ್ಯಕ್ಷೆ ಆಶಾ ವಿ., ಸದಸ್ಯರಾದ ರಾಜಶೇಖರ ಶೆಟ್ಟಿ, ಲೋಕೇಶ್ ಅಂಕದಕಟ್ಟೆ, ನೇತ್ರಾವತಿ, ಪುಟ್ಟಿ, ಸುಶೀಲ ಪೂಜಾರ್ತಿ, ನಾಗರಾಜ ಕಾಂಚನ್, ವಿವೇಕ, ಗುತ್ತಿಗೆದಾರರಾದ ರಾಜೇಶ್ ಉಡುಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ, ಪರಿಶಿಷ್ಟ ಪಂಗಡದ ಅಧಿಕಾರಿ ವಿಶ್ವನಾಥ್ ಶೆಟ್ಟಿ, ಕೊರಗ ಸಮುದಾಯದ ಮುಖಂಡರಾದ ಗಣೇಶ್ ಕೊರಗ, ಕೃಷ್ಣ ಮೇಪು ಮುಂತಾದವರು ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News