×
Ad

ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಅಹ್ವಾನ

Update: 2025-01-24 18:52 IST

ಉಡುಪಿ: ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕಥೋಲಿಕ್ ಸಭಾ ಉಡುಪಿ ಪ್ರದೇಶ ಇವರ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಟ್ಟದ ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ-2024ಕ್ಕೆ ಕಥೊಲಿಕ್ ಕೊಂಕಣಿ ಕ್ರೈಸ್ತರಿಂದ 2024ರ ಜನವರಿಯಿಂದ ಡಿಸೆಂಬರ್‌ವರೆಗೆ ಪ್ರಕಟಪಡಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ.

ಪುರಸ್ಕಾರಕ್ಕೆ ಧಾರ್ಮಿಕ, ವೈಚಾರಿಕ, ವೈಜ್ಞಾನಿಕ, ಐತಿಹಾಸಿಕ, ಸಮಾಜ ಶಾಸ್ತ್ರ, ಜಾನಪದ ಅಧ್ಯಯನ, ಜೀವನಚರಿತ್ರೆ, ವ್ಯಕ್ತಿಚಿತ್ರಣ, ಸಂಪಾದಿತ ಕೃತಿಗಳ ಸಂಗ್ರಹ, ಕೊಂಕಣಿಯಿಂದ ಭಾಷಾಂತರಿತ ಕೃತಿಗಳು, ಕಥಾ ಸಂಗ್ರಹ, ಕಾದಂಬರಿ, ಕಾವ್ಯ ಸಂಗ್ರಹ, ನಾಟಕ, ಕಿರು ನಾಟಕ ಸಂಗ್ರಹಗಳನ್ನು ಕಳುಹಿಸ ಬಹುದು. ಒಂದು ಬಾರಿ ಪ್ರಶಸ್ತಿ ಪಡೆದ ವ್ಯಕ್ತಿಗೆ ಪುನಹ ಭಾಗವಹಿಸಲು ಅವಕಾಶವಿರುವುದಿಲ್ಲ.

ಪ್ರಶಸ್ತಿಯು 25000ರೂ. ನಗದು, ಸ್ಮರಣಿಕೆಯನ್ನು ಹೊಂದಿರುತ್ತದೆ. ಮುಂದಿನ ಕಥೊಲಿಕ್ ಸಭಾ ಉಡುಪಿ ಪ್ರದೇಶದ ವಾರ್ಷಿಕ ಮಹಾಸಭೆಯಲ್ಲಿ ವಿಜೇತರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಲೇಖಕರು ತಮ್ಮ ಕೃತಿಗಳ ಮುದ್ರಿತ 4 ಪ್ರತಿಗಳನ್ನು 2025ರ ಫೆಬ್ರವರಿ 28ರೊಳಗೆ ಅಲೋನ್ಸ್ ಡಿಕೋಸ್ಟಾ, ಸಂಚಾಲ ಕರು, ದಿ ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ, ಕಥೊಲಿಕ್ ಸಭಾ ಉಡುಪಿ ಪ್ರದೇಶ, 1ನೇ ಮಹಡಿ, ಅನುಗ್ರಹ, ಪಾಲನಾ ಕೇಂದ್ರ ಕಕ್ಕುಂಜೆ, ಸಂತೆಕಟ್ಟೆ ಪೋಸ್ಟ್ ಉಡುಪಿ - 576105 ಈ ವಿಳಾಸಕ್ಕೆ ಕಳುಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಲ್ಫೋನ್ಸ್ ಡಿಕೋಸ್ಟಾ (ಮೊ:9035996144) ಇವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News