ಉಡುಪಿ: ದೂರದರ್ಶಕದಲ್ಲಿ ಗ್ರಹಗಳ ವೀಕ್ಷಣೆಗೆ ಅವಕಾಶ
Update: 2025-01-24 18:59 IST
ಉಡುಪಿ: ಜ.25ರ ಸಂಜೆಯ ವೇಳೆ ಆಕಾಶದಲ್ಲಿ ಶನಿ, ಶುಕ್ರ, ಗುರು, ಮಂಗಳ ಗ್ರಹಗಳು ನಕ್ಷತ್ರದಂತೆ ಬರಿಗಣ್ಣಿಗೆ ಕಾಣಿಸಲಿದ್ದು, ಇವುಗಳನ್ನು ಮಣಿಪಾಲದ ಆಕಾಶಕಾಯ ವೀಕ್ಷಕ ಆರ್. ಮನೋಹರ್ ಅವರು ಆವಿಷ್ಕಾರ ಮಾಡಿದ ದೂರದರ್ಶಕದ ಮೂಲಕ ನೇರವಾಗಿ ನೋಡು ವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಲಾಗಿದೆ ಎಂದು ಕಾರ್ಯಕ್ರಮ ಸಂಘಟಕ ಗಣೇಶ್‌ರಾಜ್ ಸರಳಬೆಟ್ಟು ತಿಳಿಸಿದ್ದಾರೆ.
ಜ.25ರ ಸಂಜೆ 6:30ರಿಂದ ಗ್ರಹಗಳ ಪಥಸಂಚಲನ ಆರಂಭ ಗೊಂಡು ಸ್ಪಷ್ಟವಾಗಿ ಕಾಣುವ ತನಕ ಸಾರ್ವಜನಿಕರಿಗೆ, ಶಾಲಾ ವಿದ್ಯಾರ್ಥಿ ಗಳಿಗೆ ನೋಡಲು ಅವಕಾಶ ಮಾಡಿಕೊಡಲಾಗುವುದು. ಉಡುಪಿಯ ಖಗೋಳ ವೀಕ್ಷಕರು, ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಉಡುಪಿಯ ಮಾರುತಿವೀಥಿಕಾದ ಚಿತ್ತರಂಜನ್ ಸರ್ಕಲ್ ಬಳಿ ಇರುವ ಹೋಟೆಲ್ ಸ್ವದೇಶ್ ಹೆರಿಟೇಜಿನಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮವನ್ನು ಉದ್ಯಮಿ ಎಂ ಶ್ರೀನಾಗೇಶ್ ಹೆಡ್ಡೆ ಉದ್ಘಾಟಿಸಲಿದ್ದಾರೆ ಎಂದು ಗಣೇಶ ಸರಳೆಬೆಟ್ಟು ತಿಳಿಸಿದ್ದಾರೆ.