×
Ad

ಉಡುಪಿ ನಗರಸಭೆ: ಅವಧಿ ಮುಗಿದಿರುವ ಬ್ಯಾನರ್ /ಕಟೌಟ್ ತೆರವಿಗೆ ಸೂಚನೆ

Update: 2025-02-01 21:05 IST

ಉಡುಪಿ, ಫೆ.1: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಖಾಯಂ ಜಾಹೀರಾತು ಫಲಕಗಳಲ್ಲಿ ನಗರಸಭೆ ಯಿಂದ ನೀಡಲಾಗುವ ಅನುಮತಿ ಸಂಖ್ಯೆ ಮತ್ತು ದಿನಾಂಕವನ್ನು ಕಡ್ಡಾಯವಾಗಿ ದಾಖಲಿಸಬೇಕಾಗಿದೆ. ಆದರೆ ಹಲವಾರು ಖಾಯಂ ಜಾಹೀರಾತುದಾರರು ತಮ್ಮ ಜಾಹೀರಾತು ಫಲಕಗಳಲ್ಲಿ ಅನುಮತಿ ಸಂಖ್ಯೆಯನ್ನು ನಮೂದಿಸದೇ ಇರುವುದು ಹಾಗೂ ಅವಧಿ ಮುಗಿದಿರುವ ಬ್ಯಾನರ್/ಕಟೌಟ್‌ಗಳನ್ನು ತೆರವುಗೊಳಿಸದೇ ಇರುವುದು ಕಂಡು ಬಂದಿದೆ.

ಆದ್ದರಿಂದ ತಮ್ಮ ಖಾಯಂ ಜಾಹೀರಾತು ಫಲಕಗಳಲ್ಲಿ ಅನುಮತಿ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸದೇ ಇರುವ ವರು ಫೆಬ್ರವರಿ 7ರ ಒಳಗೆ ಅವುಗಳನ್ನು ದಾಖಲಿಸಬೇಕು. ದಾಖಲಿಸದೇ ಇರುವ ಜಾಹೀರಾತು ಫಲಕಗಳನ್ನು ಹಾಗೂ ಅವಧಿ ಮುಗಿದಿರುವ ಬ್ಯಾನರ್/ಕಟೌಟ್‌ಗಳನ್ನು ಅನಧಿಕೃತವೆಂದು ಭಾವಿಸಿ ನಗರಸಭೆಯಿಂದ ತೆರವುಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News