ಸಿರಿಸಿಂಗಾರದ ನೇಮೋತ್ಸವ ಮುಂದೂಡಿಕೆ
Update: 2025-02-03 20:57 IST
ಉಡುಪಿ, ಫೆ.3: ಫೆ.8 ಮತ್ತು 9ರಂದು ನಡೆಯಬೇಕಿದ್ದ ಶ್ರೀಬಬ್ಬುಸ್ವಾಮಿ ದೈವಸ್ಥಾನ ಬಡಾನಿಡಿಯೂರು ಕದಿಕೆ ಇದರ ಸಿರಿ ಸಿಂಗಾರ ನೇಮೋತ್ಸವವನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಮಾರ್ಚ್ 15 ಮತ್ತು 16ರಂದು ನಡೆಯಲಿದೆ.
ಶ್ರೀಬಬ್ಬುಸ್ವಾಮಿ ಪರಿವಾರದೈವಗಳ ಸಿರಿ ಸಿಂಗಾರ ನೇಮೋತ್ಸವ ದೈವಸ್ಥಾನದ ನಿಗದಿತ ಸ್ಥಳದಲ್ಲಿ ಜರಗಲಿದೆ ಎಂದು ದೈವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.