ಕಾಂಗ್ರೆಸ್ ಹಿರಿಯ ಮುಖಂಡ ಗೋಪಾಲಕೃಷ್ಣ ಶೆಟ್ಟಿ ನಿಧನ
Update: 2025-02-10 17:29 IST
ಉಡುಪಿ, ಫೆ.10: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಟಿ.ಗೋಪಾಲಕೃಷ್ಣ ಶೆಟ್ಟಿ(77) ಇಂದು ನಿಧನರಾದರು.
ತಾಪಂನ ಮಾಜಿ ಸದಸ್ಯರಾಗಿದ್ದ ಅವರು, ಪ್ರಸುತ್ತ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಗೌರವ ಸಲಹೆಗಾರರಾಗಿದ್ದರು. ಕಿರಣ್ ಮಿಲ್ಕ್ ಸಂಸ್ಥೆಯ ಮಾಲಕರಾಗಿ ಹಲವಾರು ವರ್ಷಗಳ ಕಾಲ ನಿರಂತರ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸಂತಾಪ ವ್ಯಕ್ತಪಡಿಸಿದ್ದಾರೆ.