×
Ad

‘ಕಥೆ ಕೇಳೋಣ’ ಕೇಳುಗರಿಗೆ ರೇಡಿಯೋ ಸೆಟ್ ವಿತರಣೆ

Update: 2025-02-10 17:33 IST

ಉಡುಪಿ, ಫೆ.10: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ರೇಡಿಯೋ ಮಣಿಪಾಲ್ ಸಹಯೋಗ ದಲ್ಲಿ ನಡೆಯುತ್ತಿರುವ ಸರಣಿ ಕಾರ್ಯಕ್ರಮ ’ಕಥೆ ಕೇಳೋಣ’ದ ಭಾಗವಾಗಿ, ಕೇಳುಗರಿಗೆ ರೇಡಿಯೋ ಸೆಟ್‌ಗಳನ್ನು ಉಚಿತ ವಾಗಿ ಹಸ್ತಾಂತರಿಸುವ ಅಭಿಯಾನ ಮ್ಯಾಕ್ಸ್ ಮೀಡಿಯಾ ಆವರಣದಲ್ಲಿ ನಡೆಯಿತು.

ಚಲನಚಿತ್ರ ನಟ ರಂಗ ನಿರ್ದೇಶಕ ಮಂಡ್ಯ ರಮೇಶ್ ಫಲಾನುಭವಿಗಳಿಗೆ ರೇಡಿಯೋಗಳನ್ನು ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಮುಖ್ಯಸ್ಥೆ ಡಾ. ರಶ್ಮಿ ಅಮ್ಮೆಂಬಳ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಸಾಮಾಜಿಕ ಜಾಲತಾಣದ ಸಂಚಾಲಕ ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ, ರೇಡಿಯೊ ಮಣಿಪಾಲದ ಸ್ವಯಂ ಸೇವಕ ಸುನೀತಾ ಅಂಡಾರು ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News