×
Ad

ಮತ್ಸ್ಯಸಂಪದ ಯೋಜನೆ ಸಹಾಯಧನ: ಮೀನುಗಾರರಿಂದ ಅರ್ಜಿ ಆಹ್ವಾನ

Update: 2025-02-12 21:30 IST

ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ-ಫಲಾ ನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಘಟಕವಾರು/ವರ್ಗವಾರು ಗುರಿಗಳನ್ನು ನಿಗದಿಪಡಿಸಿದ್ದು, ಯೋಜನೆಯನ್ನು ಪಾರದರ್ಶಕ ವಾಗಿ ಅನಿಷ್ಠಾನಗೊಳಿಸಲು ಜಿಲ್ಲೆಯ ಅರ್ಹ ಮೀನುಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಘಟಕಗಳ ವಿವರ: ಪಚ್ಚಿಲೆ ಕೃಷಿ, ಸಾಂಪ್ರದಾಯಿಕ ಮತ್ತು ಮೋಟಾರೀಕೃತ ಮೀನುಗಾರಿಕಾ ದೋಣಿಗಳ ಮೀನುಗಾರರಿಗೆ ಸುರಕ್ಷತಾ ಕಿಟ್‌ಗಳನ್ನು ಒದಗಿಸಲು ಬೆಂಬಲ, ಸಾಂಪ್ರದಾಯಿಕ ಮೀನುಗಾರರಿಗೆ (ಬದಲಿ) ದೋಣಿ ಮತ್ತು ಬಲೆ ಒದಗಿಸು ವುದು, ಐಸ್‌ಪ್ಲ್ಯಾಂಟ್/ಕೋಲ್ಡ್ ಸ್ಟೋರೇಜ್ ನಿರ್ಮಾಣ, 10 ಟನ್ ಸಾಮರ್ಥ್ಯದ ಐಸ್‌ಪ್ಲ್ಯಾಂಟ್/ ಕೋಲ್ಡ್ ಸ್ಟೋರೇಜ್ ನಿರ್ಮಾಣ ಹಾಗೂ ಮನರಂಜನಾ ಮೀನುಗಾರಿಕಾ ಘಟಕಗಳಿಗೆ ಸಹಾಯಧನ ನೀಡಲಾಗುವುದು.

ಅರ್ಜಿ ಸಲ್ಲಿಸಲು ಫೆಬ್ರವರಿ 19 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News