×
Ad

ವಾಣಿಜ್ಯ ಸಂಕೀರ್ಣಗಳ ಕಲುಷಿತ ನೀರನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸೂಚನೆ

Update: 2025-02-13 20:50 IST

ಸಾಂದರ್ಭಿಕ ಚಿತ್ರ

ಉಡುಪಿ, ಫೆ.13: ನಗರಸಭಾ ವ್ಯಾಪ್ತಿಯಲ್ಲಿರುವ ವಾಣಿಜ್ಯ ಸಂಕೀರ್ಣಗಳ ಮಾಲಕರು ತಮ್ಮ ಕಟ್ಟಡದ ಕಲುಷಿತ ನೀರನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಸೂಕ್ತಕ್ರಮ ಜರಗಿಸಲಾಗುವುದು ಎಂದು ಈಗಾಗಲೇ ನೋಟಿಸ್ ನೀಡಲಾಗಿದ್ದರೂ ಸಹ ನಗರಸಭೆಯ ವ್ಯಾಪ್ತಿಯಲ್ಲಿ ಮಳೆ ನೀರು ಹರಿಯುವ ಚರಂಡಿಗಳಿಗೆ ವಸತಿ ಸಮುಚ್ಚಯ, ಹೋಟೆಲ್, ಇತ್ಯಾದಿ ವಾಣಿಜ್ಯ ಸಂಕೀರ್ಣಗಳ ಕೊಳಚೆ ನೀರನ್ನು ಅನಧಿಕೃತವಾಗಿ ಬಿಡುತ್ತಿರುವುದು ಕಂಡು ಬಂದಿದೆ.

ಇದರಿಂದ ಕಲುಷಿತ ನೀರು ಕುಡಿಯುವ ನೀರಿನ ಮೂಲಗಳನ್ನು ಸೇರಿ ನೆರೆಹೊರೆಯ ಬಾವಿಗಳ ನೀರು ಸಹ ಹಾಳಾಗುತ್ತಿ ರುವ ಹಾಗೂ ನೈರ್ಮಲ್ಯಕ್ಕೂ ತೊಂದರೆಯುಂಟಾಗಿರುವ ಬಗ್ಗೆ ನಿರಂತರ ದೂರುಗಳು ಕೇಳಿಬರುತ್ತಿವೆ.

ಆದ್ದರಿಂದ ನಗರಸಭೆಯ ನೋಟಿಸ್‌ನ ಹೊರತಾಗಿಯೂ ಎಚ್ಚೆತ್ತುಕೊಳ್ಳದೇ ತಮ್ಮ ಕಟ್ಟಡದ ಕೊಳಚೆ ನೀರನ್ನು, ಮಳೆ ನೀರು ಹರಿಯುವ ಚರಂಡಿಗೆ ಬಿಡುತ್ತಿರುವ ಕಟ್ಟಡ ಮಾಲಕರ ವಿರುದ್ಧ ಕ್ರಮ ಕೈಗೊಂಡು ಸದರಿ ಕಟ್ಟಡಗಳ ಮೂಲಭೂತ ಸೌಕರ್ಯ ಗಳನ್ನು ಕಡಿತಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News