×
Ad

ಕುಂದಾಪುರ| ಸಹಕಾರ ಸಂಸ್ಥೆಯಿಂದ ಕೋಟ್ಯಂತರ ರೂ. ವಂಚನೆ ಆರೋಪ: ಪ್ರಕರಣ ದಾಖಲು

Update: 2025-02-13 21:05 IST

ಕುಂದಾಪುರ, ಫೆ.13: ಕುಂದಾಪುರ ಸೌಹಾರ್ದ ಕ್ರೆಡಿಕ್ ಕೋ ಆಪರೇಟಿವ್ ಲಿಮಿಟೆಡ್‌ನಿಂದ ಠೇವಣಿದಾರರಿಗೆ ಹಣವನ್ನು ವಾಪಾಸ್ಸು ನೀಡದೇ ಕೋಟ್ಯಂತರ ರೂ. ಮೋಸ ಮಾಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಶಿವಾನಂದ, ನಿರ್ದೇಶಕರುಗಳಾದ ಪ್ರಕಾಶ ಲೋಬೋ, ಮಹೇಶ ಲಕ್ಷ್ಮಣ ಕೊತ್ವಾಲ, ವಿಠಲ, ಅವಿನಾಶ ಪಿಂಟೋ, ಕೆ.ರಾಜೇಶ ದೈವಜ್ಞ, ಎಚ್.ಮಹಾಬಲ, ರತ್ನಾಕರ, ದಯಾನಂದ, ಮರ್ವಿನ ಫೆರ್ನಾಂಡಿಸ್, ಸರೋಜ, ಸುಧಾಕರ, ಗೋಪಾಲ, ಡಾ.ದಿನಕರ ಸೇರಿಕೊಂಡು ಒಳಸಂಚು ರೂಪಿಸಿ ಸುಮಾರು 44 ಮಂದಿಯ ಒಟ್ಟು 7,25,24,831ರೂ. ಠೇವಣಿ ಹಣವನ್ನು ವಾಯಿದೆ ಮುಗಿದರೂ ವಾಪಾಸ್ಸು ನೀಡದೇ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News