ಉಡುಪಿ ಅಪರ ಜಿಲ್ಲಾಧಿಕಾರಿಯಾಗಿ ಅಬೀದ ಗದ್ಯಾಳ
Update: 2025-02-14 20:34 IST
ಅಬೀದ ಗದ್ಯಾಳ
ಉಡುಪಿ, ಫೆ.14: ಸದ್ಯ ವಿಜಯಪುರ ಜಿಲ್ಲೆ ಇಂಡಿ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಅಬೀದ ಗದ್ಯಾಳ ಅವರನ್ನು ಖಾಲಿ ಇರುವ ಉಡುಪಿ ಅಪರ ಜಿಲ್ಲಾಧಿಕಾರಿಯಾಗಿ ಸರಕಾರ ವರ್ಗಾಯಿಸಿದೆ.
ಕಳೆದೊಂದು ವರ್ಷಕ್ಕೂ ಅಧಿಕ ಸಮಯ ಉಡುಪಿ ಎಡಿಸಿಯಾಗಿ ಕಾರ್ಯ ನಿರ್ವಹಿಸಿದ್ದ ಮಮತಾದೇವಿ ಅವರನ್ನು ಕಳೆದ ತಿಂಗಳು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು.