×
Ad

ಕೊಂಕಣ ರೈಲ್ವೆಯಲ್ಲಿ ರೋರೋ ಸೇವೆ ಮುಂದುವರಿಕೆ

Update: 2025-02-15 19:37 IST

ಉಡುಪಿ, ಫೆ.15: ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿ.(ಕೆಆರ್‌ಸಿಎಲ್) ಕೊಂಕಣ ರೈಲು ಮಾರ್ಗದಲ್ಲಿ ಕೋಲಾಡ್ ಹಾಗೂ ಸುರತ್ಕಲ್ ನಡುವೆ 1999ರಿಂದ ರೋರೋ ಸೇವೆ (ರೋಲ್ ಆನ್-ರೋಲ್ ಆಫ್) ನೀಡುತಿದ್ದು, ಟ್ರಕ್‌ಗಳ ಸಂಚಾರದಲ್ಲಿ ಇದು ಹೊಸ ಕ್ರಾಂತಿಯನ್ನೇ ಮಾಡಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಕೊಂಕಣ ರೈಲು ಮಾರ್ಗದಲ್ಲಿ ಈ ಸೇವೆ ಕಳೆದ 25 ವರ್ಷಗಳಿಂದ ನಿರಂತರವಾಗಿ ನಡೆಯುತಿದ್ದು, ಈ ಸೇವೆಯ ಹೊರ ಗುತ್ತಿಗೆ ಪಡೆದಿದ್ದ ಅಂಜನಾ ಟ್ರೇಡ್‌ನ ಗುತ್ತಿಗೆ ಫೆ.14ಕ್ಕೆ ಮುಕ್ತಾಯಗೊಂಡಿದೆ. ಹೀಗಾಗಿ ಈ ಸೇವೆಯನ್ನು ಬಯಸುವ ಲಾರಿ ಮಾಲಕರು ರೋರೋ ಸೇವೆಗಾಗಿ ಕೋಲಾಡ್ ಹಾಗೂ ಸುರತ್ಕಲ್‌ನಲ್ಲಿರುವ ಮುಂಗಡ ಬುಕ್ಕಿಂಗ್ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕೊಂಕಣ ರೈಲು ಮಾರ್ಗದಲ್ಲಿ ರೋರೋ ಸೇವೆ ಹಿಂದಿನಂತೆ ಮುಂದುವರಿಯಲಿದ್ದು, ಹೆಚ್ಚಿನ ಮಾಹಿತಿಗಳಿಗಾಗಿ ಟ್ರಕ್ಕರ್‌ಗಳು ಕೊಂಕಣ ರೈಲ್ವೆಯ ವೆಬ್‌ಸೈಟ್ - www.konkanrailway.com-ನ್ನು ಸಂಪರ್ಕಿಸುವಂತೆ ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News