×
Ad

ಕಾಡೂರು ಗ್ರಾಪಂಗೆ ಪ್ರಶಸ್ತಿಯ ಗರಿ

Update: 2025-02-22 19:06 IST

ಉಡುಪಿ, ಫೆ.22: ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಪಂಗಳ ಸರ್ವೋತ್ತಮ ಸಾಧನೆಗಾಗಿ ಜಿಲ್ಲಾ ಪಂಚಾಯತ್ ರಾಷ್ಟ್ರಮಟ್ಟದಲ್ಲಿ ನಾನಾಜೀ ದೇಖಮುಖ್ ಸರ್ವೋತ್ತಮ್ ಪಂಚಾಯತ್ ಸತತ ವಿಕಾಸ್ ಪುರಸ್ಕಾರದಡಿ ತೃತೀಯ ಸ್ಥಾನಗಳಿಸಿ 2 ಕೋಟಿ ರೂ. ನಗದು ಬಹುಮಾನ ಗಳಿಸಿದ್ದು ಅದನ್ನು ಜಿಲ್ಲೆಯ ಗ್ರಾಪಂಗಳಿಗೆ ಹಂಚಿಕೆ ಮಾಡಿ ನೀಡಲಾಗಿದ್ದು, ಅದರಲ್ಲಿ 19 ಲಕ್ಷ ರೂ. ನಗದು ಪುರಸ್ಕಾರವನ್ನು ಕಾಡೂರು ಗ್ರಾಪಂ ಪಡೆದುಕೊಂಡಿದೆ

ಸುಸ್ಥಿರ ಅಭಿವೃದ್ಧಿ ಪ್ರಶಸ್ತಿ ವರ್ಗದಲ್ಲಿ ಆರೋಗ್ಯಕರ ಪಂಚಾಯತ್ ವಿಭಾಗದಲ್ಲಿ ದ್ವಿತೀಯ ಸ್ಥಾನ(7ಲಕ್ಷ ರೂ.), ಸಾಕಷ್ಟು ನೀರು ಹೊಂದಿರುವ ಪಂಚಾಯತ್‌ನ ವರ್ಗದಲ್ಲಿ ದ್ವಿತೀಯ ಸ್ಥಾನ(7 ಲಕ್ಷ ರೂ.), ಮಹಿಳಾ ಸ್ನೇಹಿ ಪಂಚಾಯತ್ ವಿಭಾಗದಲ್ಲಿ ತೃತೀಯ ಸ್ಥಾನ(5 ಲಕ್ಷ ರೂ.)ವನ್ನು ಪಡೆದುಕೊಂಡಿದೆ.

ಈ ಪ್ರಶಸ್ತಿಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಪ್ರತೀಕ್ ಬಾಯಲ್ ಮಂಗಳೂರಿನಲ್ಲಿ ಶನಿವಾರ ನಡೆದ ಹೊಂಬೆಳಕು ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News